ವಿರಕ್ತ ಮಠದ ಪಕ್ಕದಲ್ಲಿ ಮಸೀದಿ ಕಟ್ಟುವ ಯೋಜನೆ

0
21

ಮಠ ಮಾನ್ಯಗಳು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗ. ಈಗ ವಕ್ಫ್ ಹೆಸರಲ್ಲಿ ವಿರಕ್ತ ಮಠದ ಜಾಗ ನಮ್ಮದು ಎಂದು ಕೇಳುತ್ತಿರುವುದು ಯಾವ ರೀತಿಯಾದ ನ್ಯಾಯ ?

ಬೆಂಗಳೂರು: ಅನ್ನ, ಅಕ್ಷರ, ಆಶ್ರಯ, ಆರೋಗ್ಯವನ್ನು ನೀಡುತ್ತಿರುವ ಮಠಗಳು ಸಹ ನಮ್ಮ ಆಸ್ತಿ ಎಂದು ವಕ್ಫ್ ಮಂಡಳಿ ಹೇಳಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸುತ್ತೂರು, ಸಿದ್ಧಗಂಗೆ, ಸಿದ್ದಾರೂಢ, ಚುಂಚನಗಿರಿ ಸೇರಿದಂತೆ ನೂರಾರು ಮಠಗಳು ಧಾರ್ಮಿಕ ಕಾರ್ಯಗಳೊಂದಿಗೆ ಅಕ್ಷರದ ಕ್ರಾಂತಿ ಹರಡುತ್ತಿವೆ; ಸಂಸ್ಕೃತಿ, ಸದಾಚಾರವನ್ನು ಹೇಳಿಕೊಡುತ್ತಿದೆ. ಮಠ ಮಾನ್ಯಗಳು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗ. ಈಗ ವಕ್ಫ್ ಹೆಸರಲ್ಲಿ ವಿರಕ್ತ ಮಠದ ಜಾಗ ನಮ್ಮದು ಎಂದು ಕೇಳುತ್ತಿರುವುದು ಯಾವ ರೀತಿಯಾದ ನ್ಯಾಯ ? ವಿರಕ್ತ ಮಠದ ಪಕ್ಕದಲ್ಲಿ ಮಸೀದಿ ಕಟ್ಟುವ ಯೋಜನೆಯನ್ನು ವಕ್ಫ್ ಹಮ್ಮಿಕೊಂಡಿದೆಯೇ ಅಥವಾ ದೇಶದ ಸಂಸ್ಕೃತಿಯನ್ನು ನಾಶ ಪಡಿಸಲು ನಮ್ಮ ಮಠಗಳನ್ನು ಟಾರ್ಗೆಟ್ ಮಾಡಿದೆಯಾ ಎಂಬುದನ್ನು ಸ್ಪಷ್ಟ ಪಡಿಸಲಿ ಎಂದಿದ್ದಾರೆ.

Previous articleರೈತರಿಗೆ ನೋಟಿಸ್ ನೀಡಿದ್ದರೆ ವಾಪಸ್
Next articleಸರ್ಕಾರ ಹೇಗೆ ಇರಬಾರದು ಎಂಬುದಕ್ಕೆ ಕಾಂಗ್ರೆಸ್ ಉದಾಹರಣೆ