ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಮನೆ

0
18

ಶ್ರೀರಂಗಪಟ್ಟಣ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿನ ಮರದ ಪ್ಲೇನಿಂಗ್ ಕಾರ್ಖಾನೆ ಹೊತ್ತಿ ಉರಿದ ಘಟನೆ ಶ್ರೀರಂಗಪಟ್ಟಣ ಹೊರ ವಲಯದ ಗಂಜಾಮ್ ನಲ್ಲಿ ನಡೆದಿದೆ.

ಗ್ರಾಮದ ಚಾಂಚಾಳರ ಬೀದಿಯಲ್ಲಿನ ಅಂಬಿಕಾ ಪ್ಲೈವುಡ್ ಪ್ಲೈನಿಂಗ್ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದ್ದು, ಶನಿವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡು ಕಾರ್ಖಾನೆಯಲ್ಲಿನ ಯಂತ್ರೋಪಕರಣಗಳು ಸೇರಿದಂತೆ ಕಚ್ಚಾ ಪದಾರ್ಥಗಳು ಹಾಗೂ ಮನೆಯ ಮೇಲ್ಛಾವಣಿ ಸುಟ್ಟು ಹೋಗಿವೆ.

ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಈ ಸಂಬಂಧ ಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Previous articleರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆಯಾಗದ ಚೆಕ್‌ಪೋಸ್ಟ್, ಡಿಸಿ, ಎಸ್ಪಿ ಗರಂ..!
Next articleದೆಹಲಿಯಲ್ಲಿ ಇಂಡಿಯಾ ರ‍್ಯಾಲಿ