ವಿದ್ಯುತ್ ತಗುಲಿ ಮಹಿಳೆ ಸಾವು

0
9

ವಾಡಿ: ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ಕಮರವಾಡಿ ತಾಂಡಾದ ನಿವಾಸಿ ಯೊಬ್ಬಳು ತೊಳೆದ ಬಟ್ಟೆಯನ್ನು ಮನೆಯ ಮೇಲ್ಚಾವಣಿ ಮೇಲೆ ಒಣಹಾಕಲು ಹೋದಾಗ ಬಟ್ಟೆಗೆ ವಿದ್ಯುತ್ ಆವರಿಸಿಕೊಂಡ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಶನಿವಾರ ಮದ್ಯಾಹ್ನ ನಡೆದಿದೆ.

ತಾಂಡಾದ ನಿವಾಸಿ ಕವಿತಾ ಗಂಡ ಪೂಲಸಿಂಗ್ ಚವ್ಹಾಣ (35), ಮೃತ ದುರ್ದೈವಿಯಾಗಿದ್ದಾರೆ. ಭಯ ಭೀತಿಗೊಂಡು ಬಿಡಿಸಲು ಹೋದ ಸಂಬಂಧಿ ಚಾಂದಿಬಾಯಿ ಎನ್ನುವ ಮಹಿಳೆಗೂ ಸಹ ವಿದ್ಯುತ್ ತಗುಲಿದ್ದು ಕೈಮುರಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಇಡೀ ಗ್ರಾಮಕ್ಕೆ ಡಬಲ್ ಪೇಸ್ ವಿದ್ಯುತ್: ಜೆಸ್ಕಾಂ ಇಲಾಖೆ ಅಳವಡಿಸಿದ ವಿದ್ಯುತ್ ಟಿಸಿಯಿಂದ ಡಬಲ್ ಪೇಸ್ ಸಂಪರ್ಕ ಆವರಿಸಿಕೊಂಡಿದೆ. ಇಡೀ ಮನೆಗಳಿಗೆ ವಿದ್ಯುತ್ ಶಾಕ್ ನೀಡುತ್ತಿದ್ದು, ತಾಂಡಾದ ನಿವಾಸಿಗಳು ಆತಂಕ ಪಡುವಂತಾಗಿದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳು ತಾಂಡಾದಲ್ಲಿ ಬೀಡು ಬಿಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಎರಡು ಮಕ್ಕಳನ್ನು ಕೊಲೆ ಮಾಡಿ ತಾಯಿ ಆತ್ಮಹತ್ಯೆ
Next articleರಾಜ್ಯದಲ್ಲಿ ಬಿಜೆಪಿ ಅಲೆ