ವಿದ್ಯುತ್ ಅವಘಡದಿಂದ ಶಿಕ್ಷಕಿ ಸಾವು

0
71

ಗಂಗಾವತಿ(ಕೊಪ್ಪಳ): ವಿದ್ಯುತ್ ಅವಘಡದಿಂದ ಶಿಕ್ಷಕಿಯೊಬ್ಬಳು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೃತ ಶಿಕ್ಷಕಿಯನ್ನು ಹರಿತಾ(34) ಎಂದು ಗುರುತಿಸಲಾಗಿದೆ. ಗಂಗಾವತಿಯ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಳು. ಇವರು ಬೆಳಿಗ್ಗೆ ಶಾಲೆಗೆ ಕೆಲಸಕ್ಕೆಂದು ತೆರಳುವಾಗ ವಿದ್ಯುತ್ ವೈರ್ ಕಟ್ ಆಗಿ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ.

ಘಟನಾಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೋಲಿಸರು ಭೇಟಿ‌ ನೀಡಿ, ಪರೀಶಿಲನೆ ನಡೆಸಿದ್ದು,‌ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleರಾಹುಲ್ ಗಾಂಧಿ ಭೇಟಿಯಾದ ಸಿಎಂ ಸಿದ್ದರಾಮಯ್ಯ
Next articleಕಳ್ಳಿಯರ ಗ್ಯಾಂಗ್ ಕೈಚಳಕ: 1.13 ಕೋಟಿ ರೂ. ಚಿನ್ನಾಭರಣ ಕದ್ದೊಯ್ದ ಲೇಡೀಸ್ ಟೀಂ…!