ವಿಜಯಪುರ ಆಯ್ತು… ಈಗ ಯಾದಗಿರಿ ಮತ್ತು ಧಾರವಾಡ ಜಿಲ್ಲೆ…

0
35

ನಾಡಿನ ಅನ್ನದಾತರ ಒಂದೇ ಒಂದು ಇಂಚು ಭೂಮಿಯನ್ನೂ ಕಸಿದುಕೊಳ್ಳಲು ಕರ್ನಾಟಕ ಬಿಜೆಪಿ ಬಿಡುವುದಿಲ್ಲ

ಬೆಂಗಳೂರು: ವಿಜಯಪುರ ಆಯ್ತು ಈಗ ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ರೈತರ ಮೇಲೆ ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ನಡೆದಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಾಡಿನ ರೈತರ ಪಾಲಿಗೆ ಔರಂಗಜೇಬ್ ಆಗಿರುವ ಸಿಎಂ ಸಿದ್ದರಾಮಯ್ಯ ಅವರು, ಮುಸ್ಲಿಮರ ತುಷ್ಟೀಕರಣಕ್ಕಾಗಿ ಅನ್ನದಾತರ ಭೂಮಿ ಕಸಿದುಕೊಳ್ಳುತ್ತಿದ್ದಾರೆ. ಧರ್ಮದ್ರೋಹಿ ಟಿಪ್ಪು ಸುಲ್ತಾನನನ್ನ ಆದರ್ಶವಾಗಿಟ್ಟುಕೊಂಡಿರುವ ಕರ್ನಾಟಕ ಕಾಂಗ್ರೆಸ್‌ ಸರಕಾರ, ವಕ್ಫ್ ಮಂಡಳಿ ಹೆಸರಿನಲ್ಲಿ ಇಡೀ ರಾಜ್ಯವನ್ನ ಕೊಳ್ಳೆ ಹೊಡೆಯುವ ಸಂಚು ರೂಪಿಸಿದೆ. ನಾಡಿನ ಅನ್ನದಾತರ ಒಂದೇ ಒಂದು ಇಂಚು ಭೂಮಿಯನ್ನೂ ಕಸಿದುಕೊಳ್ಳಲು ಕರ್ನಾಟಕ ಬಿಜೆಪಿ ಬಿಡುವುದಿಲ್ಲ. ಕರ್ನಾಟಕದ ಪ್ರತಿ ಹಳ್ಳಿಯೂ, ಪ್ರತಿ ಮನೆಯೂ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ದಿನ ದೂರವಿಲ್ಲ ಎಂದಿದ್ದಾರೆ.

Previous articleಸಂಡೂರಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ
Next articleಜಯನಗರ ಕೈಬಿಟ್ಟಿರುವುದು ಏಕೆ…?