ವಾರದಲ್ಲಿ ೯೦ ಗಂಟೆ ಕೆಲಸ: ಖರ್ಗೆ ವಿರೋಧ

0
21
ಖರ್ಗೆ

ನವದೆಹಲಿ: ವಾರದಲ್ಲಿ ೯೦ ಗಂಟೆ ಕಾರ್ಮಿಕರು ಕೆಲಸ ಮಾಡಬೇಕೆನ್ನುವ ಎಲ್ ಅಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯನ್ ಅವರ ಹೇಳಿಕೆಗೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿ ಕಾರ್ಜುನಖರ್ಗೆ ಬುಧವಾರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರು ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಬಾರದೆಂದು ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಹಾಗೂ ಸಂವಿಧಾನ ಕರ್ತೃ ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದ ವರು ಹೇಳಿಕೊಂಡಿದ್ದಾರೆ. ಕೋಟ್ಲಾ ರಸ್ತೆಯ ೯ಎಯಲ್ಲಿ ನಿರ್ಮಿಸಲಾಗಿರುವ ಕಾಂಗ್ರೆಸ್‌ನ ನೂತನ ಕೇಂದ್ರ ಕಚೇರಿಯನ್ನು ಉದ್ಘಾಟಿಸಿದ ನಂತರ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರಿಗೆ ಧನ್ಯವಾದ ಹೇಳುತ್ತೇನೆ. ಆದರೆ ಕಂಪನಿ ಅಧ್ಯಕ್ಷರು ವಾರದಲ್ಲಿ ೯೦ ಗಂಟೆಗಳ ಕಾಲ ಕೆಲಸ ಮಾಡುವ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಹೇಳಿದರು.

Previous articleರಮೇಶ್ ವಿರುದ್ಧ ವಿಜಯೇಂದ್ರ ಮೊದಲ ಬಹಿರಂಗ ಕಿಡಿ
Next article3 ಯುದ್ಧ ನೌಕೆಗಳ ಲೋಕಾರ್ಪಣೆ