ಲೋಕ ಅದಾಲತ್: ಒಂದಾದ ೩೯ ಜೋಡಿಗಳು

0
29

ದಾವಣಗೆರೆ: ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ ೩೯ ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ.
ಹರಿಹರ ತಾಲ್ಲೂಕು ನ್ಯಾಯಾಲಯದ ೩, ಚನ್ನಗಿರಿ ತಾಲ್ಲೂಕು ನ್ಯಾಯಾಲಯದಲ್ಲಿ ೧, ಹೊನ್ನಾಳಿ ನ್ಯಾಯಾಲಯದ ೧ ಮತ್ತು ಜಗಳೂರು ತಾಲ್ಲೂಕು ನ್ಯಾಯಾಲಯದಲ್ಲಿ ೧ ಪ್ರಕರಣದಲ್ಲಿ ವಿವಾಹ ವಿಚ್ಚೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ ಪ್ರಕರಣ ಹೀಗೆ ಜಿಲ್ಲೆಯಲ್ಲಿ ಒಟ್ಟಾರೆ ೩೯ ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ.
ಮರು ಹೊಂದಾಣಿಕೆಯಾದ ಜೋಡಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣನವರ ಮತ್ತು ಇತರೆ ನ್ಯಾಯಾಧೀಶರು ಅಭಿನಂಧನೆ ಸಲ್ಲಿಸಿ ಒಂದಾದ ಜೋಡಿಗಳು ಮುಂಬರುವ ಜೀವನ ಸುಖಕರವಾಗಲಿ ಎಂದು ಸಿಹಿ ಹಂಚಿ ಹಾರೈಸಿದರು.

Previous articleಒಂದೇ ಕುಟುಂಬದ ಮೂವರು ಯುವಕರು ನೀರು ಪಾಲು
Next articleಮಹಿಳೆ ಆತ್ಮಹತ್ಯೆ:  ಕೊಲೆ ಆರೋಪ