ಬೆಂಗಳೂರು: ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸೊನ್ನೆ ಸುತ್ತುವುದು ಮಾತ್ರ ಗ್ಯಾರೆಂಟಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಹಣಕ್ಕಾಗಿ ಲೋಕಸಭಾ ಟಿಕೆಟ್‌ಗಳನ್ನು ಮಾರಾಟಕ್ಕಿಟ್ಟಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ನಡೆಯಿಂದ ಬೇಸತ್ತು ಸ್ವತಃ ಅವರ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ರಾಜೀನಾಮೆ ನೀಡರುವ ಘಟನೆ ಕಾಂಗ್ರೆಸ್ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ. ಒಂದು ಕಡೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಚಿವರ ತೀವ್ರ ನಿರಾಸಕ್ತಿ, ಮತ್ತೊಂದು ಕಡೆ ಹಣ್ಣಕ್ಕಾಗಿ ದೊಡ್ಡ ಕುಳಗಳಿಗೆ ಟಿಕೆಟ್ ಹರಾಜು ಹಾಕಿ ಕಾರ್ಯಕರ್ತರಿಗೆ ಪಂಗನಾಮ, ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸೊನ್ನೆ ಸುತ್ತುವುದು ಮಾತ್ರ ಗ್ಯಾರೆಂಟಿ ಎಂದಿದ್ದಾರೆ.