ಮಂಡ್ಯ: ಚಪ್ಪಲಿ ಅಂಗಡಿಯಲ್ಲಿ ಚಪ್ಪಲಿ ಖರೀದಿಸಲು ಬಂದ ಮಹಿಳಾ ಗ್ರಾಹಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮುಸ್ಲಿಂ ಯುವಕನನ್ನು ಸಾರ್ವಜನಿಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ಬಳಿ ನಡೆದಿದೆ.
ಕೆ.ಆರ್. ಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಶೂ ಕಾರ್ನರ್ ಎಂಬ ಹೆಸರಿನಲ್ಲಿ ಚಪ್ಪಲಿ ಅಂಗಡಿ ಇಟ್ಟಿರುವ ಸಿದ್ದಿಖ್ ಪಾಷ್ ಎನ್ನುವವನೇ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು. ಅಂಗಡಿಗೆ ಚಪ್ಪಲಿ ತೆಗೆದುಕೊಳ್ಳಲು ಬಂದ ಮಹಿಳೆಯ ಗುಪ್ತಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದನು ಎಂದು ಆರೋಪಿಸಿ ಸಾರ್ವಜನಿಕರು ರಸ್ತೆಯಲ್ಲಿ ಆರೋಪಿಗೆ ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ್ದಾರೆ.