ರೈತರು ಒಮ್ಮೆ ನಿಮ್ಮ ಪಹಣಿ ಪರಿಶೀಲಿಸಿ

0
22

ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಯ ರೈತರು ಸಹ ಸಂಪರ್ಕ ಮಾಡಬಹುದು,

ಬೆಂಗಳೂರು: ವಕ್ಫ್ ನಿರಂಕುಶ ನಡೆಯ ಬಗ್ಗೆ ರೈತರು ಧೃತಿಗೆಡಬೇಕಾಗಿಲ್ಲ. ನಾನು ನಿಮ್ಮ ಜೊತೆ ಇದ್ದೇನೆ ಎಂದು ಪುನರುಚ್ಚರಿಸಲು ಬಯಸುತ್ತೇನೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ವಕ್ಫ್ ಬೋರ್ಡ್‌ನವರು ನಿಮ್ಮ ಪಹಣಿಯಲ್ಲಿ ಅವರ ಹೆಸರು ಹಾಕಿದ್ದಾರೆ ಎಂಬುದನ್ನು ರೈತರು ಒಮ್ಮೆ ಪರಿಶೀಲಿಸಿ. ಈ ಕೆಲಸವನ್ನು ಪ್ರತಿಯೊಂದು ರೈತರು ಆದಷ್ಟು ಬೇಗ ಮಾಡಬೇಕು. ಈ ಮಾಹಿತಿ ನಮ್ಮ ಕಾನೂನು ಹೋರಾಟಕ್ಕೆ ನಿರ್ಣಾಯಕ ಹಾಗೂ ಸಾಕ್ಷ್ಯ ಸಂಗ್ರಹಿಸಲು ಅಗತ್ಯವಾದ ಪ್ರಕ್ರಿಯೆ ಆಗಿರುತ್ತದೆ. ಆದ್ದರಿಂದ ಇಂದೇ ನಿಮ್ಮ ಪಹಣಿಯ ಕಾಪಿ ಪಡೆದು ಪರಿಶೀಲನೆ ಮಾಡಿ, ಒಂದು ವೇಳೆ ವಕ್ಫ್ ಎಂದು ನಮೂದಿಸಲಾಗಿದ್ದಲ್ಲಿ ಕೂಡಲೇ ಜಮೀನಿನ ದಾಖಲೆ ಹಾಗೂ ಪಹಣಿಯನ್ನು ನಮ್ಮ ಕಚೇರಿಗೆ ನೀಡುವುದು. ನಮ್ಮ ದೇಶ ಸಂವಿಧಾನದಿಂದ ನಡೆಯುತ್ತಿದೆಯೇ ಹೊರತು ಷರಿಯಾ ಕಾನೂನಿಂದಲ್ಲ. ಈ ಹೋರಾಟದಲ್ಲಿ ನಮಗೆ ಖಂಡಿತ ಯಶಸ್ಸು ಸಿಗುತ್ತದೆ ಎಂದಿದ್ದಾರೆ.

ರೈತರಿಗಾಗಿ ಉಚಿತ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯದ ಯಾವುದೇ ಮೂಲೆಯಲ್ಲಿ ರೈತರ ಜಮೀನಲ್ಲಿ ವಕ್ಫ್ ಬೋರ್ಡ ಹೆಸರು ಇದ್ದರೂ ಅವರು ನಮ್ಮ ಬಳಿ ಬರಲಿ. ನಮ್ಮ ಶಾಸಕರ ಕಛೇರಿಗೆ ಬಂದು ದಾಖಲಾತಿ ನೀಡಿದರೆ ಅವರ ಪರವಾಗಿ ನಾವು ಕಾನೂನು ಹೋರಾಟ ಮಾಡುತ್ತೇವೆ. ರೈತರು ಆತಂಕ ಪಡಬಾರದು, ಕಾನೂನು ಹೋರಾಟ ಮಾಡೋಣ. ಯಾರಿಗಾದರೂ ನೋಟಿಸ್ ಬಂದರೆ ನಮ್ಮ ಕಛೇರಿಗೆ ಸಂಪರ್ಕ ಮಾಡಿ. ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಯ ರೈತರು ಸಹ ನಮ್ಮ ಕಛೇರಿಗೆ ಸಂಪರ್ಕ ಮಾಡಬಹುದು, ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ರಚಿಸುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ. ರೈತರಿಗೆ ಉಚಿತ ಕಾನೂನು ನೆರವು ನೀಡುತ್ತೇವೆ ಎಂದಿದ್ದಾರೆ

Previous articleಸರ್ಕಾರದ ನಡೆಯಿಂದ ಬೇಸರ: ಅನ್ನದಾತ ದೀಪಾವಳಿ ಆಚರಿಸೋದಿಲ್ಲ
Next articleಧಾರವಾಡ ಜಿಲ್ಲೆಯಲ್ಲೂ ರೈತನ ಪಹಣಿಯಲ್ಲಿ `ವಕ್ಫ್’ ಹೆಸರು ದಾಖಲು!