ರೆಡ್ಡಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

0
11

ಹೈದರಾಬಾದ್: ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಹೈದರಾಬಾದ್ ಮತ್ತು ಖಮ್ಮಂನಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಪಿ ಶ್ರೀನಿವಾಸ್ ರೆಡ್ಡಿ ಅವರ ಕಚೇರಿ ಮತ್ತು ವಸತಿ ಆವರಣದಲ್ಲಿ ಶೋಧ ನಡೆಸಿದ್ದಾರೆ. ಈ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ರೆಡ್ಡಿ ಅವರು ಖಮ್ಮಂ ಜಿಲ್ಲೆಯ ಪಲೈರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಇದೇ ವೇಳೆ ಐಟಿ ದಾಳಿ ಖಂಡಿಸಿ ಶ್ರೀನಿವಾಸ ರೆಡ್ಡಿ ಅವರ ನಿವಾಸದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು. ದಾಳಿ ನಡೆಸುತ್ತಿರುವ ಬಿಜೆಪಿ ಮತ್ತು ಬಿಆರ್‌ಎಸ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಬಿಗಿ ಭದ್ರತೆಯ ನಡುವೆ ದಾಳಿ ನಡೆಸಲಾಗಿದೆ.

Previous articleವೃದ್ಧವೀರ ಕುವರಸಿಂಹ
Next articleಕ್ರೂಸರ್​ಗೆ ಲಾರಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು