ರೂಪಾಯಿ ಭಾರೀ ಕುಸಿತ: ಡಾಲರ್‌ಗೀಗ ೮೫.೫ ರೂ.

0
15

ಮುಂಬೈ: ಶುಕ್ರವಾರ ಭಾರತೀಯ ರೂಪಾಯಿ ಮೌಲ್ಯದಲ್ಲಿ ೩೫ ಪೈಸೆ ಕುಸಿತ ಉಂಟಾಗಿದೆ. ಇದು ಕಳೆದ ಆರು ತಿಂಗಳಲ್ಲಿ ಒಂದೇ ದಿನದ ಅತೀ ದೊಡ್ಡ ಕುಸಿತವಾಗಿದೆ. ಅಮೆರಿಕನ್ ಬಾಂಡ್ ಇಳುವರಿ ಏರಿಕೆಯಿಂದ ಡಾಲರ್ ಮೌಲ್ಯ ಹೆಚ್ಚಾಗಿರುವುದರಿಂದ ಹೂಡಿಕೆದಾರರು ಅತ್ತ ಆಕರ್ಷಿತರಾಗಿದ್ದಾರೆ. ಇದರಿಂದಾಗಿ ವಿದೇಶಿ ನಿಧಿಗಳಿಗೆ ಬೇಡಿಕೆ ಹೆಚ್ಚಾಗಿದ್ದು ಭಾರತೀಯ ರೂಪಾಯಿ ಮೌಲ್ಯ ಕುಸಿಯುವಂತಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದ ಆಮದು ವೆಚ್ಚ ಹೆಚ್ಚಾಗಿದೆ. ಜೊತೆಗೆ, ತಿಂಗಳ ಕೊನೆಗೆ ಡಾಲರ್ ಬೇಡಿಕೆ ಹೆಚ್ಚಾಗಿರುವುದರಿಂದ ರೂಪಾಯಿ ಕುಸಿತಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ಭಾರತೀಯ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

Previous articleಸಂಸ್ಕೃತಿ, ಕೃಷಿ ಕ್ಷೇತ್ರಕ್ಕೆ ಹವ್ಯಕರ ಕೊಡುಗೆ ಅಪಾರ
Next articleಶುದ್ಧ ಆರ್ಥಿಕ ಚಿಂತಕ ಕಾಯಕವೇ ಕೈಲಾಸಕ್ಕೆ ಪ್ರತೀಕ