ಕಲಬುರಗಿ: ಅಪರಿಚಿತ ವ್ಯಕ್ತಿಯ ರುಂಡವಿಲ್ಲದ ಮುಂಡ ಪತ್ತೆಯಾಗಿರುವ ಘಟನೆ ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬರ್ಬರವಾಗಿ ಕೊಲೆ ಮಾಡಿ ಶವ ಬಿಸಾಡಿರೋ ಶಂಕೆ ವ್ಯಕ್ತವಾಗಿದೆ. ರುಂಡ ಬೇರ್ಪಡಿಸಿ ಮಂಡವನ್ನು ಎಸೆದು ಹೊಗಿರೋ ದುಷ್ಕರ್ಮಿಗಳು ರಾತ್ರಿಯೆಲ್ಲಾ ಪಾರ್ಟಿ ಮಾಡಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತ ಉಪನಗರ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.