ಇಳಕಲ್ : ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಳಕಲ್ ಸೀರೆಗಳನ್ನು ನಗರದ ಖ್ಯಾತ ಜವಳಿ ವ್ಯಾಪಾರಿ ಡಾಗಾ ಪರಿವಾರದ ಸದಸ್ಯರು ತೋರಿಸುತ್ತಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ಡಾಗಾ ಪರಿವಾರದ ಜಗದೀಶ್ ಮತ್ತು ಪತ್ನಿ ಸೋನು ದ್ರೌಪದಿ ಮುರ್ಮು ಅವರಿಗೆ ಸೀರೆಗಳನ್ನು ತೋರಿಸುತ್ತಿದ್ದಾರೆ. ಈ ಸಮಯದಲ್ಲಿ ಕರ್ನಾಟಕ ರಾಜ್ಯಪಾಲ ಥಾವರಚಂದ ಗೆಹ್ಲೋಟ ಮತ್ತಿತರರು ಇದ್ದಾರೆ.