ರಾಮಮಂದಿರ ವಿರುದ್ಧ ಹೋರಾಟ ಮಾಡಿದವರಿಗೂ ಉದ್ಘಾಟನೆಗೆ ಆಹ್ವಾನ

0
24

ಹುಬ್ಬಳ್ಳಿ: ಅಯೋಧ್ಯೆ ದೊಡ್ಡ ಪ್ರಮಾಣದ ಸಾಂಸ್ಕೃತಿಕ, ಧಾರ್ಮಿಕ ಪ್ರವಾಸಿ ಕೇಂದ್ರವಾಗಲಿದೆ. ರಾಮ ಮಂದಿರ ವಿಚಾರವಾಗಿ ನಾವು ರಾಜಕೀಯ ಮಾಡುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷವು ರಾಮಮಂದಿರ ವಿರುದ್ಧ ಹೋರಾಟ ಮಾಡಿತ್ತು. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸೇರಿದಂತೆ ಅನೇಕರು ಹೊಟ್ಟೆಕಿಚ್ಚಿನಿಂದ ಮಾತನಾಡಿದ್ದರು. ಹೀಗೆ, ಹೊಟ್ಟೆಕಿಚ್ಚು ಪಟ್ಟವರಿಗೂ ಆಹ್ವಾನ ಕೊಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕಾಗಿ ಸನಾತನ ಧರ್ಮದ ಅಭಿಮಾನಿಗಳು, ರಾಮನ ಭಕ್ತರು ಸತತ ಹೋರಾಟ ಮಾಡಿದ್ದಾರೆ. ನಮ್ಮೆಲ್ಲರ ಸೌಭಾಗ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾಲದಲ್ಲಿ ಯಶಸ್ಸು ಸಿಕ್ಕಿದೆ ಎಂದರು.

Previous articleಗ್ಯಾರಂಟಿಯಿಂದಾಗಿ ಬರಗಾಲದಲ್ಲೂ ಬಡವರು ಸಂಕಷ್ಟದಿಂದ ಪಾರಾಗಿದ್ದಾರೆ
Next articleಕಾಂಗ್ರೆಸ್‌ನಿಂದ ದಲಿತರಿಗೆ ನ್ಯಾಯ ಸಿಗಲ್ಲ