ಇಳಕಲ್ : ಕುರಿಗಾಹಿ ವ್ಯಕ್ತಿಯೊಬ್ಬನನ್ನು ರಾಡ್ ದಿಂದ ಹೊಡೆದು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಾಲೂಕಿನ ನಂದವಾಡಗಿ ಗ್ರಾಮದ ಬಸವರಾಜ ಮಲ್ಲಪ್ಪ ವಗ್ಗರ ೩೩ ಇದೇ ತಾಲೂಕಿನ ಕರಡಿ ಗ್ರಾಮದಲ್ಲಿ ಪತ್ನಿಯ ಮನೆಯಲ್ಲಿ ವಾಸವಾಗಿದ್ದನು. ಎಂದಿನಂತೆ ಕುರಿಗಳನ್ನು ಹೊಲದಲ್ಲಿನ ಕೊಟ್ಟಿಗೆಯಲ್ಲಿ ಕಟ್ಟಿ ಮನೆಗೆ ವಾಪಸ್ಸು ಹೋಗುತ್ತಿದ್ದಾಗ ಅಲ್ಲಿಯೇ ಬರುವ ಹಳ್ಳದಲ್ಲಿ ಬಸವರಾಜ ಅಮಾನುಷವಾಗಿ ಕೊಲೆ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಬಸವರಾಜ ವಗ್ಗರ ಕೊಲೆಯಾಗಿ ಬಿದ್ದ ಸ್ಥಳದಲ್ಲಿ ಸೆರೆ ಬಾಟಲಿಗಳು ಸಿಗರೇಟು ನೀರಿನ ಬಾಟಲುಗಳು ಬಿದ್ದಿವೆ ಎರಡು ಬೈಕುಗಳು ಅಲ್ಲಿ ಬಂದು ಹೋಗಿರಬಹುದು ಎಂಬ ಶಂಕೆ ಕಾಡುತ್ತಿದೆ. ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲು ಸತ್ತಿಗೌಡರ ವಿಶೇಷ ತನಿಖಾ ದಳವನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.


























