ರಾಜ್ಯಸಭೆಯಲ್ಲಿ ಗದ್ದಲ: ದೇವೇಗೌಡರ ಅಸಮಾಧಾನ

0
22

ನವದೆಹಲಿ: ಕಾಂಗ್ರೆಸ್‌ ಹಾಗೂ ಇಂಡಿ ಮೈತ್ರಿಪಕ್ಷದ ಸದಸ್ಯರ ನಡೆಗೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್‌. ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ 13ನೇ ದಿನವಾದ ಗುರುವಾರ ಮತ್ತೊಮ್ಮೆ ಕೋಲಾಹಲ ಎದ್ದಿದೆ. ಅವಿಶ್ವಾಸ ನಿರ್ಣಯ, ಅದಾನಿ ವಿಷಯ ಮತ್ತು ಬಾಂಗ್ಲಾದೇಶದ ಹಿಂದೂಗಳ ವಿಷಯದ ಬಗ್ಗೆ ವಿರೋಧ ಪಕ್ಷದ ಸಂಸದರು ಸಾಕಷ್ಟು ಗದ್ದಲವನ್ನು ಸೃಷ್ಟಿಸಿದರು. ಹೀಗಾಗಿ ಮುಂದೂಡಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಮತ್ತೆ ಆರಂಭವಾದ ರಾಜ್ಯಸಭೆ ಕಲಾಪವನ್ನು ಮುಂದೂಡಬೇಕಾಯಿತು. ರಾಜ್ಯಸಭೆಯಲ್ಲಿ ಸುಗಮ ಕಲಾಪಕ್ಕೆ ಅವಕಾಶಕೊಡದೆ, ಗದ್ದಲ ಎಬ್ಬಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಹಾಗೂ ಇಂಡಿ ಮೈತ್ರಿಪಕ್ಷದ ಸದಸ್ಯರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Previous articleಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ: ಅಂತಿಮ ಫಲಿತಾಂಶ ಪ್ರಕಟ
Next articleಪಂಚಮಸಾಲಿ ಹೋರಾಟ ಹತ್ತಿಕ್ಕುವುದು ಕನಸಿನ ಮಾತು