ಸಂ.ಕ.ಸಮಾಚಾರ ಕಲಬುರಗಿ: ಕಾಶ್ಮೀರದ ಪಾಲಗಾವ್ ಘಟನೆ ಖಂಡಿಸಿ ನಗರದ ನಾನಾ ಕಡೆ ಪಾಕಿಸ್ತಾನದ ಸ್ಟೀಕರ್ ಧ್ವಜಗಳನ್ನು ನೆಲಕ್ಕೆ ಅಂಟಿಸುವ ಮುಖಾಂತರ ಭಜರಂಗ ದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ನಗರದ ಜಗತ್ ವೃತ್ತ, ಆಳಂದ ನಾಕಾ, ಮಾರ್ಕೆಟ್ ಚೌಕ್, ಸಾತ್ ಗುಂಬಜ್ ಸೇರಿ 20ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಧ್ವಜ ಅಂಟಿಸಿದ್ದಾರೆ.
ಪೊಲೀಸರಿಂದ ಯಾವುದೇ ಪರವಾನಗಿ ಪಡೆದಿಲ್ಲ ಎಂದು ಕೆಲವರನ್ನು ಬ್ರಹ್ಮಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಸ್ಥಳೀಯ ಪೊಲೀಸರ ಅನುಮತಿ ಪಡೆಯದೆ ಯಾರು ಪ್ರತಿಭಟನೆ ಮಾಡುವಂತಿಲ್ಲ ಒಂದು ವೇಳೆ ಪ್ರತಿಭಟನೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳ ಬೇಕಾಗುತ್ತದೆ. ಅನುಮತಿ ಪಡೆಯದೆ ಧ್ವಜ ಅಂಟಿಸಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ತಿಳಿಸಿದ್ದಾರೆ.