ರಸ್ತೆ ಅಪಘಾತ; ಇಬ್ಬರು ಸಾವು

0
33

ರಾಯಚೂರು: ಖಾಸಗಿ ಬಸ್ ಹಾಗೂ ಇನ್ನೋವಾ ಕಾರ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕಸಬೆ ಕ್ಯಾಂಪ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಇನ್ನೋವಾ ಕಾರ್ ನಲ್ಲಿದ್ದ ಮಾರಿಯಾ ಗೀತಾ(38) ಹಾಗೂ ಅಮಲ್ ಪಾಲ್ ಮೇರಿ(64) ಮೃತಪಟ್ಟಿದ್ದಾರೆ. ಹೈದ್ರಾಬಾದ್ ನಿಂದ ಸಿಂಧನೂರು ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್. ಗದಗ್ ನಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದ ಇನ್ನೋವಾ ಕಾರ್ ನಡುವೆ ಅಪಘಾತ ಸಂಭವಿಸಿದೆ.

ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು ಏಳು ಜನರ ಪೈಕಿ ಇಬ್ಬರ ಮೃತಪಟ್ಟಿದ್ದು, ಉಳಿದ ಐದು ಜನರು ಗಾಯಗೊಂಡಿದ್ದು ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿ ಪ್ರಕರಣ ದಾಖಲು.

Previous articleವಿಶೇಷ ತಂತ್ರಜ್ಞಾನದ ಪರಿಸರ ಸ್ನೇಹಿ ಬಸ್ಸುಗಳ ಲೋಕಾರ್ಪಣೆ
Next articleಸಿಎಂ ಕಾರ್ಯಕ್ರಮ: ಅಧಿಕಾರಿಗಳೊಂದಿಗೆ ಸಚಿವ ಲಾಡ್ ಪೂರ್ವಭಾವಿ ಸಭೆ