ಯು.ಬಿ.ವೆಂಕಟೇಶ್ ಎಐಸಿಸಿ ಕಾರ್ಯದರ್ಶಿ

0
22

ಬೆಂಗಳೂರು: ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಪುರ‍್ರಚಿಸಿ ಎಐಸಿಸಿ ಆದೇಶಿಸಿದೆ. ಮೇಲ್ಮನೆ ಸದಸ್ಯರಾದ ಯು.ಬಿ.ವೆಂಕಟೇಶ್ ಅವರನ್ನು ಎಐಸಿಸಿ ಕಾರ್ಯದರ್ಶಿಯಾಗಿ ನೇಮಿಸಿ ಒಟ್ಟು ನಾಲ್ವರಿಗೆ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ. ಇದೇ ವರ್ಷಾಂತ್ಯಕ್ಕೆ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ನೇಮಕಾತಿ ಮಹತ್ವ ಪಡೆದುಕೊಂಡಿದೆ.
ಕಾರ್ಯದರ್ಶಿಗಳಾಗಿ ಕರ್ನಾಟಕದಿಂದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಗೋವಾ, ಡಿಯು,ಡಾಮನ್, ಸೂರಜ್ ಹೆಗ್ಡೆ ಅವರಿಗೆ ತಮಿಳುನಾಡು ಮತ್ತು ಪಾಂಡಿಚೇರಿ, ಕೇರಳ ಹಾಗೂ ಪಾಂಡಿಚೇರಿಗೆ ಮನ್ಸೂರ್ ಆಲಿಖಾನ್ ಸಹಿತ ಮೂವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ವಿದೇಶ ವ್ಯವಹಾರ ಮತ್ತು ಸಾಗರೋತ್ತರ ಕಾಂಗ್ರೆಸ್‌ನ ಎಐಸಿಸಿ ಕಾರ್ಯದರ್ಶಿಯಾಗಿ ಆರತಿ ಕೃಷ್ಣ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನೇಮಿಸಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಎಐಸಿಸಿ ಕಾರ್ಯದರ್ಶಿಗಳಾಗಿ ರೋಜಿ ಎಂ ಜಾನ್, ಮಯೂರ ಎಸ್ ಜಯಕುಮಾರ್, ಅಭಿಷೇಕ್ ದತ್ ಮತ್ತು ಪಿ.ಗೋಪಿ ಅವರನ್ನು ನೇಮಕಮಾಡಿ ಆದೇಶಿಸಲಾಗಿದೆ.

Previous articleಜಾತಿ ನಿಂದನೆ: ವಕೀಲ ಜಗದೀಶ್ ಬಂಧನ
Next articleಹಿಂದುಳಿದ ರಾಜ್ಯಕ್ಕೆ ನೆರವು ಪ್ರಗತಿಪರ ರಾಜ್ಯಕ್ಕೆ ಕತ್ತರಿ