ಯುವಕನಿಗೆ ವಿದ್ಯುತ್ ಶಾಕ್: ಆಸ್ಪತ್ರೆಗೆ ದಾಖಲು

0
29

ವಾಡಿ: ವಿದ್ಯುತ್ ಶಾಕ್ ಹೊಡೆದ ಪರಿಣಾಮ ಯುವಕನೋರ್ವ ಕಲ್ಬುರ್ಗಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಜೆ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯ ಹನುಮಾನ ನಗರ ಬಡಾವಣೆಯ ನಿವಾಸಿ ಅಭಿಶೇಕ ತಂದೆ ಅರ್ಜುನ್ ಪವಾರ್ (18), ಎನ್ನುವ ಯುವಕನಿಗೆ ವಿದ್ಯುತ್ತು ತಗಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮನೆಯ ಮೇಲ್ಚಾವಣಿಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಅಸ್ವಸ್ಥಗೊಂಡಿದ್ದಾನೆ.

ಜೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ: ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ತು ತಂತಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು ಇಲಾಖೆ ಅಧಿಕಾರಿಗಳು ಸ್ಪಂದಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Previous articleಇದು ವಿಜಯಪುರ ಒಂದರ ಕಥೆಯಲ್ಲ…
Next articleಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಇಲ್ಲ