ಮೋದಿ, ಅಮಿತ್ ಶಾ ಕರ್ನಾಟಕವನ್ನು ದ್ವೇಷಿಸುತ್ತಿದ್ದಾರೆ

0
7

ಬೆಂಗಳೂರು: ಮೋದಿ ಹಾಗೂ ಅಮಿತ್ ಶಾ ಕರ್ನಾಟಕವನ್ನು ದ್ವೇಷಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಬಳಿಕ ಮಾತನಾಡಿದ ಅವರು, ಮೋದಿ, ಅಮಿತ್ ಶಾ ಅವರೇ ಯಾವ ಮುಖ ಹಿಡಿದು ಕರ್ನಾಟಕಕ್ಕೆ ಬರುತ್ತೀರಿ. ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡಿದೆ. ಮೋದಿ ಹಾಗೂ ಅಮಿತ್ ಶಾ ಕರ್ನಾಟಕವನ್ನು ದ್ವೇಷಿಸುತ್ತಿದ್ದಾರೆ. ರಾಜ್ಯದ ರೈತರನ್ನು ದ್ವೇಷಿಸುತ್ತಿದ್ದಾರೆ. 223 ತಾಲೂಕು ಬರಗಾಲ ಪೀಡಿತವಾಗಿದೆ. ಮೆಮೊರಾಡಂ ಕೊಟ್ಟರೂ ಅಮಿತ್ ಶಾ ವಿಳಂಬವಾಗಿ ಕೊಟ್ಟರು ಎಂದು ಸುಳ್ಳು ಹೇಳಿದರು, ಮನವಿ ಕೊಟ್ಟು ಏಳು ತಿಂಗಳು ಆಗಿದೆ. ನಾನೇ ಸ್ವತಃ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೇನೆ. ಅಮಿತ್ ಶಾ ಡಿ.23ಕ್ಕೆ ಸಭೆ ಕರದಿದ್ದೇವೆ ಎಂದು ಹೇಳಿದ್ದರು. ಆದರೆ, ಇವತ್ತಿನವರೆಗೆ ಯಾವುದೇ ಸಭೆ ಮಾಡಿಲ್ಲ.‌ ಮೋದಿಗೆ ಅವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಬಂದಾಗ ಮಾತ್ರ. ಪ್ರವಾಹ ಬಂದಿದ್ದಾಗ ಬರಲಿಲ್ಲ ಎಂದರು.

Previous articleಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಆಸ್ಪತ್ರೆಗೆ ದಾಖಲು
Next articleಕಾಂಗ್ರೆಸ್ ಆಡಳಿತದಲ್ಲಿ ‘ಹನುಮಾನ್ ಚಾಲೀಸಾ’ ಆಲಿಸುವುದು ಅಪರಾಧ