ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ

0
10

ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ. ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದ ಜನತೆಗೆ ತಿಳಿಸಿದ್ದಾರೆ ಎಂದು ಸಚಿವ ಡಿ. ಸುಧಾಕರ ಹೇಳಿದರು.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ‌ಮಾಡುತ್ತಿದ್ದಾರೆ. ಅವರಿಗೆ ಬೇರೆ ಏನು ಕೆಲಸ ಇಲ್ಲ. ರಾಜಕೀಯ ಇತಿಹಾಸದಲ್ಲಿ ಕಳಂಕ ರಹಿತವಾಗಿ ಹೊರಗೆ ಬಂದವರು. ಅವರು ಯಾವುದೇ ಒಂದು ಜಾಗದ ವಿಚಾರದಲ್ಲಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಬಿಜೆಪಿ ಅವರ ಆರೋಪ ಸರಿ ಇಲ್ಲ ಎಂದರು.
ಮುಖ್ಯಮಂತ್ರಿಗಳು ಹೇಳಿದ್ದು ಮುಡಾ ಸರಿ ಮಾಡುತ್ತೇವೆ. ಮುಡಾದಲ್ಲಿ ಹಗರಣ ಬಿಜೆಪಿ ಕಾಲದಲ್ಲಿ ಆಗಿದೆ ಎಂದರು. ವಾಲ್ಮೀಕಿ ಹಗರಣದಲ್ಲಿ ಸಿಐಟಿ ತನಿಖೆ ವೇಳೆ ಇಡಿ ಎಂಟ್ರಿ ವಿಚಾರ, ವಾಲ್ಮೀಕಿ ಹಗರಣದಲ್ಲಿ ತನಿಖೆ ನಡೆಯುತ್ತಿದೆ. ಇದು ಬ್ಯಾಂಕ್ ಹಾಗೂ ಕಾರ್ಪೋರೇಷನ್ ಗೆ ಸಂಬಂಧಿಸಿದ್ದು, ವಾಲ್ಮೀಕಿ ಹಗರಣ ನಾಗೇಂದ್ರ ಅವರ ಗಮನಕ್ಕೆ ಬಂದಿರಲಿಲ್ಲ. ಇಡಿ ಅಥವಾ ಸಿಬಿಐ ಆದರು ವಿಚಾರಣೆ ಮಾಡಲಿ. ರಾಜ್ಯ ಸರ್ಕಾರ ಎಸ್ ಐಟಿ ನೇಮಕ ಮಾಡಿದೆ. ಎಸ್ ಐಟಿ ಅವರು ತನಿಖೆ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿಗೆ ನಾನು ಏನು ಮಾತನಾಡಲ್ಲ ಎಂದರು.

Previous articleಕಾಂಗ್ರೆಸ್‌: ಲೋಕಸಭೆಯ ಉಪ ನಾಯಕರಾಗಿ ಗೌರವ್ ಗೊಗೊಯ್
Next article46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ‘ರತ್ನ ಭಂಡಾರ್’