ಬೆಂಗಳೂರು: ಮಳೆಗಾಲದ ಅಧಿವೇಶನದಲ್ಲಿ ಮೀಸಲಾತಿ ಹಕ್ಕನ್ನು ಸರ್ಕಾರಕ್ಕೆ ಪ್ರತಿಪಾದಿಸುವಂತೆ ಹಕ್ಕೊತ್ತಾಯದ ಪತ್ರವನ್ನು ಸ್ವೀಕರಿಸಲಾಯಿತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬೆಳಗಾವಿಯಲ್ಲಿ ಕೂಡಲಸಂಗಮ ಮಹಾಪೀಠದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ ಆಗ್ರಹ ಪತ್ರ ಚಳುವಳಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಳೆಗಾಲದ ಅಧಿವೇಶನದಲ್ಲಿ ಮೀಸಲಾತಿ ಹಕ್ಕನ್ನು ಸರ್ಕಾರಕ್ಕೆ ಪ್ರತಿಪಾದಿಸುವಂತೆ ಹಕ್ಕೊತ್ತಾಯದ ಪತ್ರವನ್ನು ಸ್ವೀಕರಿಸಲಾಯಿತು ಎಂದಿದ್ದಾರೆ.





















