ಮಿನಿ ಬಸ್ ಪಲ್ಟಿ: 30 ಮಂದಿಗೆ ಗಾಯ

0
11

ಚಿಕ್ಕಮಗಳೂರು: ಬಾಬಾಬುಡನ್ ಗಿರಿ ಪ್ರವಾಸಕ್ಕೆ ಆಗಮಿಸಿದ್ದ ಮಿನಿ ಬಸ್ ಅಪಘಾತವಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಾಣಿಕ್ಯಧಾರಾ ತಿರುವಿನಲ್ಲಿ ಭಾನುವಾರ ಸಂಭವಿಸಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅದಿವಾಲದಿಂದ ಬಾಬಾಬುಡನ್ ಗಿರಿ ಪ್ರವಾಸಕ್ಕೆ ಆಗಮಿಸಿದ್ದ ಒಂದೇ ಕುಟುಂಬದ 30 ಜನರು ಸಂಚರಿಸುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಮಕ್ಕಳು ಮಹಿಳೆಯರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ಬಾಬಾಬುಡನ್ ಗಿರಿ ವೀಕ್ಷಿಸಿ ನಂತರ ಮಾಣಿಕ್ಯಧಾರಾ ಕಡೆಗೆ ತೆರಳುತ್ತಿದ್ದ ವೇಳೆ ಎರಡನೇ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಾರು ಆಂಬುಲನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ತರಲಾಯಿತು. ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಒಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದೆ.

Previous articleಹೊರ ಹೋದವರು ವಾಪಸ್ ಬರುವ ಗ್ಯಾರಂಟಿ ಇಲ್ಲ
Next articleಮೋದಿ ಬೆಳಗಾವಿಗೆ ಬಂದು ಭಯಾನಕ ಹಸೀ ಸುಳ್ಳು ಹೇಳಿ ಹೋಗಿದ್ದಾರೆ