ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಬಸ್‌: ನಾಲ್ವರು ಸಾವು, ಐವರು ಗಂಭೀರ

0
26

ಪಣಜಿ: ವೆರ್ನಾ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಹಾರ ಮೂಲದ ಕಾರ್ಮಿಕರು ರಸ್ತೆ ಬದಿಯ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಬಸ್ ನುಗ್ಗಿ ಅಪಘಾತ ಸಂಭವಿಸಿದೆ. ಬಸ್ ಚಾಲಕ ಮದ್ಯ ಸೇವಿಸಿದ್ದ ಎಂದು ಇಲ್ಲಿನ ಇತರ ಕಾರ್ಮಿಕರು ಆರೋಪಿಸಿದ್ದಾರೆ.
ಸಿಕ್ಕಿರುವ ಮಾಹಿತಿಯ ಪ್ರಕಾರ, ವೆರ್ನಾ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಶನಿವಾರ ಹನ್ನೊಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೋಸ್ ಬರ್ಗರ್ ಕಂಪನಿಯ ಉದ್ಯೋಗಿಗಳನ್ನು ಐಡಿಸಿಯಲ್ಲಿ ಡ್ರಾಪ್ ಮಾಡಲು ಬಾಡಿಗೆಗೆ ಪಡೆದ ಖಾಸಗಿ ಬಸ್ ಚಾಲಕ ತಿರು ನಿರೀಕ್ಷಿಸದೆ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ತಿರುವಿನಲ್ಲಿ ನೇರವಾಗಿ ಬಸ್ಸನ್ನು ತಿರುಗಿಸದೇ ರಸ್ತೆಬದಿಯಲ್ಲಿ ಹಾಕಿದ್ದ ಶೀಟ್ ಶೆಡ್ ಬಳಿಗೆ ಕೊಂಡೊಯ್ದರು ಎನ್ನಲಾಗಿದೆ.
ಮೂರು ಗುಡಿಸಲುಗಳ ಮೇಲೆ ಬಸ್ ಹರಿದಿದ್ದು, ಮಲಗಿದ್ದ ಒಂಭತ್ತು ಜನರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Previous articleನಾಯಕರಿಗೆ ಟೀಕಿಸಿದ್ದ ಶೆಟ್ಟರ್​ ಮತ್ತೆ ಬಂದರು.. ನಾನು ಗೆದ್ದ ಮೇಲೆ ವಜಾ ರದ್ದಾಗುತ್ತೆ
Next articleರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕೊಡಿಸಿ