ಹುಬ್ಬಳ್ಳಿ: ಬೆಳಗಾವಿಯಲ್ಲಿ ಬಸ ಕಂಡಕ್ಟರ್ ಮೇಲಿನ ಹಲ್ಲೆ ಅಕ್ಷಮ್ಯ ಅಪರಾಧ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಗರದಲ್ಲಿ ಕಾಶಿ ವಿಶ್ವನಾಥ ದೇಗುಲದ ಮಾದರಿಯ ’ಶಿವರಾತ್ರಿ ಮಹೋತ್ಸವ’ದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದವರ ಮೇಲೆ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು, ರಾಜ್ಯ ಸರ್ಕಾರ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡುತ್ತಿದ್ದು. ಉಚಿತ ಗ್ಯಾರಟಿ ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಅಧಿಕಾರಕ್ಕೆ ಬಂದ ಮೇಲೆ ಎಲ್ಲದರ ಬೆಲೆ ಹೆಚ್ಚಳ ಮಾಡುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ದಿವಾಳಿಯಾಗಿದೆ, ಮನುಷ್ಯ ಸಾಯಬೇಕಾದ್ರೂ 50 ರೂ. ನೀಡಿ ಸಾಯಬೇಕು. ಸೂಸೂತ್ರವಾಗಿ ಸಾಯುವುದಕ್ಕಾದರೂ ಬಿಡಿ ಎಂದು ಸರ್ಕಾರಕ್ಕೆ ಕೇಳುವಂತಾಗಿದೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ದುರಂಹಕಾರದ ವರ್ತನೆ ಸರಿಯಲ್ಲ. ಅವರು ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನ ನೋಡಿ ಕಲಿಯಬೇಕಿದೆ, ಇತ್ತಿಚೆಗೆ ಅವರ ತಂದೆಯು ಸಹ ರಾಹುಲ್ ಗಾಂಧಿ ಸಹವಾಸದಿಂದ ಅವರಂತೆ ವರ್ತಿಸುತ್ತಿದ್ದಾರೆ ಎಂದರು.