ಮದಗಜಗಳ ಕಾದಾಟ, ಆತಂಕ

0
14

ಬೇಲೂರು: ಮದವೇರಿದ ಎರಡು ಕಾಡಾನೆಗಳು ನೀನೋ ನಾನೋ… ಎಂಬಂತೆ ಕಾದಾಟಕ್ಕೆ ಇಳಿದಿದ್ದು, ಇವುಗಳ ರೌದ್ರಾವತಾರಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದರು. ಇದು ಕಂಡುಬಂದಿದ್ದು ಗುರುವಾರ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಕಡೆಗರ್ಜೆ ಗ್ರಾಮದ ಸಮೀಪದ ಹೊಲಗದ್ದೆಯಲ್ಲಿ ಆನೆಗಳ ಘೀಳಿಡುವ ಸದ್ದು, ಬಹು ಎತ್ತರಕ್ಕೆ ಚಿಮ್ಮಿದ ಧೂಳು, ತೋಟದಲ್ಲಿನ ಬೆಳೆಗಳು ನೆಲಕಚ್ಚಿದ ದೃಶ್ಯವನ್ನು ಸ್ಥಳೀಯರು ತಮ್ಮ ಮನೆಗಳ ಮಹಡಿಯ ಮೇಲೆ ನಿಂತು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ನಡೆಸಿದರು. ಕಳೆದ ನಾಲ್ಕು ವರ್ಷಗಳಿಂದ ಕಾಡಾನೆ ಸಮಸ್ಯೆ ಮಿತಿ ಮೀರಿದ್ದು, ಸರ್ಕಾರ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆ ಜಾಣ ಮೌನಕ್ಕೆ ಜಾರಿದ್ದು, ಮಲೆನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Previous articleಮೋದಿ ರೋಡ್ ಶೋ-ಎಸ್‌ಪಿಜಿಯಿಂದ ಪರಿಶೀಲನೆ
Next articleಪಿಒಕೆ ಜನರಿಗೆ ಭಾರತ ಸೇರುವ ತವಕ