ಮಂಗಳೂರು ವಿವಿ: ಎಂಎನ್‌ಆರ್, ಸದಾಶಿವ ಶೆಟ್ಟಿ, ರೋಹನ್ ಮೊಂತೆರೊಗೆ ಗೌರವ ಡಾಕ್ಟರೇಟ್

0
44

ಮಂಗಳೂರು: ಅನುಭವಿ ಸಹಕಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಹೇರಂಭ ಇಂಡಸ್ಟ್ರೀಸ್ ಮಾಲೀಕ, ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ, ಉದ್ಯಮಿ ರೋಹನ್ ಮೊಂತೆರೊ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಘೋಷಿಸಿದೆ.
ಮಾ.೨೯ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯುವ ವಿಶ್ವವಿದ್ಯಾನಿಲಯದ ೪೩ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಉಪಾಧ್ಯಕ್ಷ ಪ್ರೊ. ವಿ.ಎನ್. ರಾಜಶೇಖರನ್ ಪಿಳ್ಳೈ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ, ಅತಿಥಿಗಳಾಗಿ ಭಾಗವಹಿಸುವರು ಎಂದರು.
ಘಟಿಕೋತ್ಸವದಲ್ಲಿ ೬೪ ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಅವರಲ್ಲಿ ೩೩ ಮಹಿಳೆಯರು, ೩೧ ಪುರುಷರು, ಮೂವರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಇದ್ದಾರೆ. ೫೪ ಚಿನ್ನದ ಪದಕ, ೫೬ ನಗದು ಬಹುಮಾನಗಳು ಇವೆ. ಸ್ನಾತಕ, ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು ೧೨೭ ರ‍್ಯಾಂಕ್‌ಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ ೬೭ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಕುಲಸಚಿವ (ಪರೀಕ್ಷಾಂಗ) ದೇವೇಂದ್ರಪ್ಪ ಎಚ್. ಹೇಳಿದರು.
ಕುಲಸಚಿವ (ಆಡಳಿತ) ರಾಜು ಮೊಗವೀರ ಉಪಸ್ಥಿತರಿದ್ದರು.

Previous articleಅಕ್ರಮ ಗೋಹತ್ಯೆ, ಗೋಸಾಗಾಟ ಮಾಡುವವರ ಆಸ್ತಿ ಮುಟ್ಟುಗೋಲು ಅಸ್ತ್ರ ಬಳಸಿ
Next articleಯತ್ನಾಳರನ್ನು ಕಾಂಗ್ರೆಸ್‌ಗೆ ಕರೆತರುವೆ