ಭೈರನಹಳ್ಳಿ ಸಮೀಪ ಚಿರತೆ ಪ್ರತ್ಯಕ್ಷ

0
59

ಸಾಸ್ವೆಹಳ್ಳಿ (ಹೊನ್ನಾಳಿ): ಇಲ್ಲಿಗೆ ಸಮೀಪದ ಭೈರನಹಳ್ಳಿ ಹಾಗೂ ಕ್ಯಾಸಿನಕೆರೆ ರಸ್ತೆಯ ಬೆಂಗಳೂರು ತಿಪ್ಪೇಶಣ್ಣ ತೋಟದ ಮನೆಯ ಹತ್ತಿರ ಶುಕ್ರವಾರ ಬೆಳಿಗ್ಗೆ ಚಿರತೆ ಓಡಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈಚೆಗೆ ಚನ್ನೇನಹಳ್ಳಿ ಗಡಿ ಭಾಗದ ಸಮೀಪದಲ್ಲಿ ಟಿಸಿಯ ಹತ್ತಿರ ಶಬ್ಧ ಆದಾಗ ಪೊದೆಯಲ್ಲಿದ್ದ ಚಿರತೆ ಓಡಿ ಹೋಗಿದೆ. ಇದನ್ನು ರೈತರು ಗಮನಿಸಿದ್ದಾರೆ. ಅಂದಿನಿಂದ ದೂರದ ಗುಡ್ಡಗಳಲ್ಲಿ ಹಾಗೂ ಊರು ಹೊರಗಿನ ಹೊಲ, ತೋಟಗಳಿಗೆ ನೀರು ಬಿಡಲು ಹೋಗಲು ರೈತರು ಭಯ ಪಡುತ್ತಿದ್ದಾರೆ ಎಂದು ಭೈರನಹಳ್ಳಿಯ ಎಚ್.ಎಲ್ ಪರಮೇಶ್ ತಿಳಿಸಿದ್ದಾರೆ.
ಚಿರತೆಯು ಕ್ಯಾಸಿನಕೆರೆ, ಚನ್ನೇನಹಳ್ಳಿ, ಭೈರನಹಳ್ಳಿ, ಹನುಮನಹಳ್ಳಿ, ಕುಳಗಟ್ಟೆ ಗ್ರಾಮದ ಗಡಿ ಭಾಗದಲ್ಲಿ ಓಡಾಡುತ್ತಿದೆ. ಈ ಭಾಗದ ರೈತರು ರಾತ್ರಿ ವೇಳೆ ಹೊಲಗಳಿಗೆ ಹೋಗುವಾಗ ಎಚ್ಚರಿಕೆ ಇರಲಿ ಹಾಗೂ ಹಗಲಿನಲ್ಲಿ ಒಬ್ಬೊಬ್ಬರೆ ಓಡಾಡಬಾರದು. ಶೀಘ್ರದಲ್ಲಿಯೇ ಚಿರತೆ ಕಂಡ ಜಾಗದಲ್ಲಿ ಬೋನ್ ಅಳವಡಿಸಲಾಗುವುದು ಎಂದು ಕುಂಬಳೂರು ಶಾಖೆಯ ಡಿ.ಆರ್.ಎಫ್.ಓ ಮೈಲಾರಸ್ವಾಮಿ ಎಲ್. ತಿಳಿಸಿದ್ದಾರೆ.

Previous articleಸರಣಿ ಅಪಘಾತ: ಹರಿಹರಪುರ ಸ್ವಾಮೀಜಿ ಪಾರು
Next articleಶೆಟ್ಟರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ