ಭೀಕರ ಅಪಘಾತ : ಯುವ ಪತ್ರಕರ್ತ ಭರತ್ ನಿಧನ

0
22

ಚಿಕ್ಕಬಳ್ಳಾಪುರ: ಭೀಕರ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತರೊಬ್ಬರು ಸಾವನ್ನಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಮಾಚಹಳ್ಳಿ ಕೆರೆ ಬಳಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತ ಜಿ. ಎಸ್. ಭರತ್ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಡಿಬಂಡೆಯಿಂದ ಬಾಗೇಪಲ್ಲಿ ಕಡೆಗೆ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಾಚಹಳ್ಳಿ ಕೆರೆ ಕಟ್ಟೆಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಘಟನೆ ವೇಳೆ ಕಾರಿನ ಏರ್​​ ಬ್ಯಾಗ್ ಓಪನ್ ಆದರೂ ಕೂಡ ಚಾಲಕನ ಜೀವ ಉಳಿದಿಲ್ಲ. ಹೊಸದಿಗಂತ ಪತ್ರಿಕೆಯಲ್ಲಿ ಜಿ ಎಸ್ ಭರತ್ ಕಾರ್ಯನಿರ್ವಹಿಸುತ್ತಿದ್ದರು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Previous articleಆರ್ಥಿಕತೆ ಕುಂಠಿತ: ತೆರಿಗೆ ಸಂಗ್ರಹ ಖೋತಾ
Next articleಸೋನಾಮಾರ್ಗ್‌ ಸುರಂಗ ಇಂದು ಉದ್ಘಾಟನೆ