ಭಾರೀ ಮಳೆ: ಕಾರ್ಕಳ ಹೆಬ್ರಿ ಕುಂದಾಪುರ ಬೈಂದೂರು ಶಾಲೆಗಳಿಗೆ ಇಂದು ರಜೆ ಘೋಷಣೆ

0
8

ಉಡುಪಿ: ಜಿಲ್ಲೆಯಾದ್ಯಂತ ಗುರುವಾರ ಭಾರೀ ಮಳೆಯಾಗುತ್ತಿದ್ದು ಅದರಲ್ಲೂ ಜಿಲ್ಲೆಯ ಕಾಪು, ಉಡುಪಿ, ಬ್ರಹ್ಮಾವರ ತಾಲೂಕುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ತಾಲೂಕುಗಳಲ್ಲಿ ವಿಪರೀತ ಮಳೆ ಸುರಿಯುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಬೈಂದೂರು, ಕುಂದಾಪುರ, ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಿ ಆಯಾ ತಾಲೂಕು ತಹಶೀಲ್ದಾರರು ಆದೇಶ ನೀಡಿದ್ದಾರೆ.

Previous articleಜಿಲ್ಲಾ ಕಾರಾಗೃಹಕ್ಕೆ ನಗರ ಪೊಲೀಸರಿಂದ ಹಠಾತ್ ದಾಳಿ
Next articleನೆರವಿನ ವಿಶ್ವಾಸ’ದಲ್ಲಿ ರಾಜ್ಯ ಈಜುಪಟು