ಬ್ರಿಟಿಷರ ಕಾಲದ ದಮನಕಾರಿ ಧೋರಣೆ

0
12

ಬೆಂಗಳೂರು: ಹಿಂದೂ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ದ್ವೇಷಿಸುವುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಪರಮ ಉದ್ದೇಶವಿದ್ದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಹಿಂದೂಪರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ನಿರಂತರ ಕ್ರೌರ್ಯ ಮೆರೆಯುತ್ತಾ ಬಂದಿರುವ ಈ ಸರ್ಕಾರ ರಾಜಸ್ಥಾನದಿಂದ ಬೆಂಗಳೂರಿಗೆ ಬರುತ್ತಿದ್ದ ಟನ್ ಗಟ್ಟಲೆ ಅಕ್ರಮ ಮಾಂಸ ರಫ್ತಿನ ಮಾಫಿಯಾ ಚಟುವಟಿಕೆಯ ಮೇಲೆ ಬೆಳಕು ಚೆಲ್ಲಿದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರೀಕವಾಗಿ ನಡೆದುಕೊಂಡಿರುವ ಪೊಲೀಸರ ದೌರ್ಜನ್ಯವನ್ನು ಕರ್ನಾಟಕ ಬಿಜೆಪಿ ಬಲವಾಗಿ ಖಂಡಿಸುತ್ತದೆ.

ಜನಜಾಗೃತಿ ಹಾಗೂ ನಾಗರೀಕ ಪ್ರಜ್ಞೆ ಮೆರೆದು ಜನರ ಆರೋಗ್ಯದ ಕಾಳಜಿ ವಹಿಸಿ ಕುರಿ ಮಾಂಸದ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಬೆಂಗಳೂರಿಗೆ ಸಾಗಿ ಬರುತ್ತಿದ್ದ ಶಂಕಿತ ಮಾಂಸದ ಕುರಿತು ಪ್ರಶ್ನೆ ಮಾಡಿದ್ದು, ಹೋರಾಡಿದ್ದು ತಪ್ಪು ಎಂದು ಪೊಲೀಸರು ಪರಿಗಣಿಸುವುದಾದರೆ, ಇನ್ನು ಮುಂದೆ ಈ ಸರ್ಕಾರದಲ್ಲಿ ಅಕ್ರಮ ಹಾಗೂ ಮಾಫಿಯಾಗಳ ವಿರುದ್ಧ ಹೋರಾಟವನ್ನು ನಡೆಸುವುದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ.

ಜನರ ಆರೋಗ್ಯದ ಕಾಳಜಿಗಾಗಿ ಪ್ರಾಮಾಣಿಕವಾಗಿ ದನಿಯೆತ್ತಿದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಅನಾಗರಿಕವಾಗಿ ವರ್ತಿಸಿರುವ ಪೊಲೀಸರ ನಡವಳಿಕೆ ಬ್ರಿಟಿಷರ ಕಾಲದ ದಮನಕಾರಿ ಧೋರಣೆಯನ್ನು ಪ್ರತಿಬಿಂಬಿಸಿದೆ. ಪೊಲೀಸರ ಕ್ರೌರ್ಯ ಹಾಗೂ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ ಎಂದಿದ್ದಾರೆ

Previous articleಪಾದಯಾತ್ರೆಗೆ ಅಪಸ್ವರ: ಪಾದಯಾತ್ರೆಗೆ HDK ಬೆಂಬಲವಿಲ್ಲ
Next articleಪಾದಯಾತ್ರೆ ಮಾಡಲಿ ಆರೋಗ್ಯಕ್ಕೆ ಒಳ್ಳೆಯದು!