ಬೇಟೆಗಾರರ ಉರುಳಿಗೆ ಸಿಲುಕಿ ಚಿರತೆ ಸಾವು

0
23

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಚಿರತೆ ಬೇಟೆಗಾರರು ಹಾಕಿದ ಅಕ್ರಮ ಉರುಳಿಗೆ ಸಿಲುಕಿ ನರಳಿ ಬಳಿಕ ಸಾವಪ್ಪಿದೆ.
ಕಾಡುಹಂದಿ ಬೇಟೆಗೆ ಉರುಳು ಹಾಕಿದ್ದ ಬೇಟೆಗಾರರು ಘಟನೆ ಬಳಿಕ ಪರಾರಿಯಾಗಿದ್ದಾರೆ. ಮೂಡಿಗೆರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಚಿರತೆಗೆ ಅಗತ್ಯವಾದ ರಕ್ಷಣೆ ನೀಡಲು ಶ್ರಮಿಸಿದ್ದರು. ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲು ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಿದರೂ ಯಾವುದೆ ಪ್ರಯೋಜನ ವಾಗಲಿಲ್ಲ. ಅರಣ್ಯಾಧಿಕಾರಿಗಳು ಚಿರತೆಗೆ ಅರವಳಿಕೆ ನೀಡಿ ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸಿದ್ದು, ಪರಾರಿಯಾದ ಬೇಟೆಗಾರರ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ. ಅಕ್ರಮ ಬೇಟೆ ತಡೆಯಲು ಅಧಿಕಾರಿಗಳು ಹೆಚ್ಚಿನ ಪೆಟ್ರೋಲಿಂಗ್ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ

Previous articleಮಹಾ ಡಿಸಿಎಂ ಶಿಂದೆಯನ್ನು ಕಾರಲ್ಲೇ ಸ್ಫೋಟಿಸುವ ಬೆದರಿಕೆ
Next articleಶಿವರಾತ್ರಿ: ಗೋಕರ್ಣ ಮುರುಡೇಶ್ವರಕ್ಕೆ ವಿಶೇಷ ಬಸ್ ವ್ಯವಸ್ಥೆ