ಬೆಳಗಾವಿಯಲ್ಲಿ ವಿರೋಧ ಇಲ್ಲ, ವದಂತಿ ಅಷ್ಟೇ

0
12

ಲಕ್ಷಾಂತರ ಜನ ಮತದಾರರು, ಸಾವಿರಾರು ಕಾರ್ಯಕರ್ತರು ಇದ್ದಾರೆ. ಎಲ್ಲೋ ನಾಲ್ಕು ಜನ ವಿರೋಧ ಮಾಡಿದರೂ ಏನೂ ಆಗಲ್ಲ. ಬೆಳಗಾವಿಯಿಂದ ನನ್ನ ಸ್ಪರ್ಧೆ ಖಚಿತ

ಹುಬ್ಬಳ್ಳಿ : ಬೆಳಗಾವಿ ಲೋಕ ಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದೇನೆ. 3 ನೇ ಲಿಸ್ಟ್‌ನಲ್ಲಿ ನನಗೆ ಟಿಕೆಟ್ ಘೋಷಣೆಯಾಗಲಿದೆ. ಬೆಳಗಾವಿಯಲ್ಲಿ ನನಗೆ ವಿರೋಧ ಇಲ್ಲ, ಬರೀ ವದಂತಿ ಅಷ್ಟೇ. ವದಂತಿಗೆ ಉತ್ತರಿಸಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಬೆಳಗಾವಿಯಲ್ಲಿ ಯಾರೂ ನನಗೆ ವಿರೋಧಿಸಿಲ್ಲ. ಪ್ರಭಾಕರ ಕೋರೆಯವರೊಂದಿಗೂ ಮಾತನಾಡಿದ್ದೇನೆ. ಪಕ್ಷದ ಘಟಕ ಕಾರ್ಯಕರ್ತರ ಮಟ್ಟದಿಂದ ಹಿಡಿದು ನಾಯಕರ ಮಟ್ಟದ ಎಲ್ಲರೊಂದಿಗೂ ಎರಡು ದಿನಗಳಿಂದ ಮಾತನಾಡಿದ್ದೇನೆ. ಅಷ್ಟೇ ಅಲ್ಲ. ರಾಜಕೀಯೇತರರೂ ಅನೇಕರು ಕರೆ ಮಾಡಿ ಸ್ವಾಗತಿಸಿದ್ದಾರೆ ಎಂದರು.
ನನ್ನ ಸ್ಪರ್ಧೆ ಬಗ್ಗೆ ಯಾರೊಬ್ಬರು ಹೇಳಿಕೆ ನೀಡಿಲ್ಲ. ವಿರೋಧದ ಹೇಳಿಕೆಗಳೂ ಇಲ್ಲ. ಬರೀ ವದಂತಿ ಅಷ್ಟೇ. ವದಂತಿಗೆ ಪ್ರತಿಕ್ರಿಯಿಸುವುದು ಅಸಾಧ್ಯ ಎಂದು ಹೇಳಿದರು. ಲಕ್ಷಾಂತರ ಜನ ಮತದಾರರು, ಸಾವಿರಾರು ಕಾರ್ಯಕರ್ತರು ಇದ್ದಾರೆ. ಎಲ್ಲೋ ನಾಲ್ಕು ಜನ ವಿರೋಧ ಮಾಡಿದರೂ ಏನೂ ಆಗಲ್ಲ. ಬೆಳಗಾವಿಯಿಂದ ನನ್ನ ಸ್ಪರ್ಧೆ ಖಚಿತ ಎಂದು ಹೇಳಿದರು.

Previous articleದೇಣಿಗೆ ನೀಡಿದ ಕಂಪನಿಗಳಿಗೆ ದೇಶದಲ್ಲಿ ಗುತ್ತಿಗೆ ನೀಡಿದ ಬಿಜೆಪಿ
Next articleಮನೆಯಿಂದಲೇ ಮತದಾನಕ್ಕೆ ಅವಕಾಶ