ಪ್ರತಿದಿನ 1,000 ಶೇಂಗಾ ಹೋಳಿಗೆ, ಶೇಂಗಾ ಹಿಂಡಿ, ಸಜ್ಜೆ ರೊಟ್ಟಿ ಬೆಂಗಳೂರಿಗೆ
ಬೆಂಗಳೂರು: ‘ಇಂಡಿ’ಯ ಬಬಲಾದ ಗ್ರಾಮದ ‘ಒಡಲ ಧ್ವನಿ ಮಹಿಳಾ ಒಕ್ಕೂಟದ’ ಸದಸ್ಯರ ಸಾಧನೆಗೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಬಹುಪರಾಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನಮ್ಮ ಸರ್ಕಾರದ ಜನಪ್ರಿಯ “ಶಕ್ತಿ” ಯೋಜನೆಯು ಮಹಿಳೆಯರ ಬದುಕಿಗೆ ಬಹುದೊಡ್ಡ ಆಸರೆಯಾಗಿದ್ದು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುತ್ತಿರುವ ನಿದರ್ಶನಗಳು ದೊರೆಯುತ್ತಲೇ ಇವೆ…
ಉಚಿತ ಬಸ್ ಪ್ರಯಾಣ ಸದ್ಬಳಕೆ ಮಾಡಿಕೊಂಡು ಪ್ರತಿದಿನ 1,000 ಶೇಂಗಾ ಹೋಳಿಗೆ, ಶೇಂಗಾ ಹಿಂಡಿ, ಸಜ್ಜೆ ರೊಟ್ಟಿಯನ್ನು ಬೆಂಗಳೂರಿಗೆ ಪೂರೈಸುತ್ತಿರುವ ‘ಇಂಡಿ’ಯ ಬಬಲಾದ ಗ್ರಾಮದ ‘ಒಡಲ ಧ್ವನಿ ಮಹಿಳಾ ಒಕ್ಕೂಟದ’ ಸದಸ್ಯರು ತಿಂಗಳಿಗೆ 20 ಸಾವಿರ ಆದಾಯ ಗಳಿಸುತ್ತಿದ್ದಾರೆ. ಆರ್ಥಿಕ ಸ್ವಾವಲಂಬನೆಯತ್ತ ದೃಢ ಹೆಜ್ಜೆ ಇಟ್ಟಿರುವ ವಿಜಯಪುರ ಜಿಲ್ಲೆಯ ಮಹಿಳೆಯರ ಯಶೋಗಾಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದಿದ್ದಾರೆ.
