ಬೀದರ್ – ಬೆಂಗಳೂರು ವಿಮಾನಯಾನ ಶೀಘ್ರದಲ್ಲೇ ಪುನರಾರಂಭ

0
13

ಬೆಂಗಳೂರು: ಬೀದರ್ – ಬೆಂಗಳೂರು ವಿಮಾನಯಾನ ಶೀಘ್ರದಲ್ಲೇ ಪುನರಾರಂಭ ಆಗಲಿದೆ ಎಂದು ಸಂಸದ ಸಾಗರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಳೆದ ಡಿಸೇಂಬರ್ ನಿಂದ ಸ್ಥಗಿತಗೊಂಡಿರುವ ಬೀದರ್ – ಬೆಂಗಳೂರು ನಾಗರಿಕ ವಿಮಾನಯಾನ ಪುನರಾರಂಭಿಸುವ ಕುರಿತು ಇಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಶ್ರೀ ರಾಮ ಮೋಹನ ನಾಯ್ಡು ಕಿಂಜರಾಪು ಅವರನ್ನು ಭೇಟಿಯಾಗಿ ಚರ್ಚಿಸಿದೆನು. ಉಡಾನ್ ಯೋಜನೆಯಡಿ ಬೀದರ ನಿಂದ ನಾಗರೀಕ ವಿಮಾನಯಾನ ಪ್ರಾರಂಭವಾಗಿತ್ತು ಆದರೆ ಸೇವಾ ಪೂರೈಕೆದಾರ ಸಂಸ್ಥೆಗಳು, ತಮಗೆ ಉಡಾನ್ ಸಬ್ಸಿಡಿ ನಿಲ್ಲಿಸಿರುವ ಕಾರಣ ವಿಮಾನ ಸೇವೆ ಸ್ಥಗಿತಗೊಳಿಸಿದ್ದು ಮತ್ತೆ ಸಬ್ಸಿಡಿ ನೀಡುವುದಾದರೆ ಸೇವೆ ಒದಗಿಸಲು ಸಂಸ್ಥೆಗಳು ಸಿದ್ಧವಿರುವ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಮಾನ್ಯ ಸಚಿವರು ಪರಿಶೀಲಿಸುವದಾಗಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.

Previous articleK.R.S ಜಲಾಶಯದಿಂದ 1,50,000 ಕ್ಯೂಸೆಕ್ಸ್ ನೀರು ಬಿಡುಗಡೆ ಎಚ್ಚರಿಕೆ ವಹಿಸಿ
Next articleಜ್ಞಾನ ಕಾರ್ಯಕ್ಕೆ ಮೊದಲ ಆದ್ಯತೆ