ಬಿಜೆಪಿ ಪಕ್ಷಕ್ಕೆ ಕೈಲಾಶ್ ಗೆಹ್ಲೋಟ್ ಸೇರ್ಪಡೆ

0
35

ನವದೆಹಲಿ: ಕೈಲಾಶ್ ಗೆಹ್ಲೋಟ್ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಎಎಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೈಲಾಶ್ ಗಹ್ಲೋಟ್ ನಿನ್ನೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಮತ್ತು ಅನಿಲ್ ಬಲುನಿ ಅವರ ಸಮ್ಮುಖದಲ್ಲಿ ಬಿಜೆಪಿ ಸದಸ್ಯತ್ವ ಪಡೆದರು.
ದೆಹಲಿ ಸರ್ಕಾರದಲ್ಲಿ ಕೈಲಾಶ್ ಗೆಹ್ಲೋಟ್ ಅವರು ಸಾರಿಗೆ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರು. ಗೆಹ್ಲೋಟ್ ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಉನ್ನತ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.
ಸಿಬಿಐ ಮತ್ತು ಇಡಿ ಭಯದಿಂದ ಬಿಜೆಪಿ ಪಕ್ಷಕ್ಕೆ ಸೇರಿಲ್ಲ ಎಂದು ಕೈಲಾಶ್ ಗೆಹ್ಲೋಟ್ ಹೇಳಿದರು. ಇದು ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರವಲ್ಲ ಯಾವುದೇ ಒತ್ತಡಕ್ಕೆ ಮಣಿದು ತೆಗೆದುಕೊಂಡಿರುವ ನಿರ್ಧಾರವೂ ಅಲ್ಲ ಎಂದು ಹೇಳಿದರು.

Previous articleಜಮೀರ್ ಹೇಳಿಕೆ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ
Next articleಪಿಕಪ್ ವಾಹನ ಪಲ್ಟಿ: ಓರ್ವ ಕಾರ್ಮಿಕ ಮಹಿಳೆ ಸಾವು