ಬಿಜೆಪಿ ಕಾರ್ಯಕರ್ತರ ಬಂಧನ

0
10

ಕಲಬುರಗಿ: ಬೆಂಗಳೂರಿನ ವಿಧಾನಸೌಧ ಘಟನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಿಂಚಿನ ಪ್ರತಿಭಟನೆ ನಡೆಸಿದ್ದು, ಈ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಐವರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನ ಘೋಷಣೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾಗ ಪೊಲೀಸರು ಹಾಗೂ ಪ್ರತಿಭಟನಾ ನಿರತರ ಮಧ್ಯೆ ತಳ್ಳಾಟ, ನೂಕ್ಕಾಟ ನಡೆಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನಾ ನಿರತರಾಗಿದ್ದ ಬಿಜೆಪಿ ಓಬಿಸಿ‌ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅವ್ವಣ್ಣ ಮ್ಯಾಕೇರಿ, ಪ್ರಮುಖರಾದ ಮಹಾದೇವ ಬೆಳಮಗಿ, ಪ್ರವೀಣ ತೆಗನೂರ, ಶಿವಯೋಗಿ ನಾಗನಹಳ್ಳಿ ಸೇರಿ ಅನೇಕರನ್ನು ಬಂಧಿಸಲಾಗಿದೆ.

ರಾಜ್ಯಾಸಭಾ ಸದಸ್ಯ ನಾಸೀರ ಹುಸೇನ ವಿರುದ್ದ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.

Previous articleFSL ವರದಿಯಲ್ಲಿ ಘೋಷಣೆ ಕೂಗಿದ್ದು ಸಾಭೀತಾದರೆ, ಕೂಗಿದ್ದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ
Next articleದೇಶದ್ರೋಹಿಗಳಿಗೆ ಕೊಟ್ಟ ಪ್ರೋತ್ಸಾಹವೇ ಘೋಷಣೆ ಕೂಗೋಕೆ ಧೈರ್ಯ