ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೊ ಕಾಯ್ದೆಯಡಿ ದೂರು ದಾಖಲು

0
8
ಮತಾಂತರ

ಹುಬ್ಬಳ್ಳಿ: ೧೭ ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿ ಗರ್ಭಧರಿಸಲು ಕಾರಣನಾಗಿದ್ದಾನೆ ಎಂದು ಆರೋಪಿಸಿ ನವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಹುಡುಗಿಯ ತಾಯಿ ದೂರು ನೀಡಿದ್ದಾರೆ. ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಗುರುವಾರ ರಾತ್ರಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ವೈದ್ಯರು ಯುಪಿಟಿ(ಮೂತ್ರ ಪರೀಕ್ಷೆ) ನಡೆಸಿದಾಗ ಬಾಲಕಿ ಗರ್ಭಧರಿಸಿದ್ದು ತಿಳಿದು ಬಂದಿದೆ. ಈ ಕುರಿತು ಪಾಲಕರಿಗೆ ಹೇಳಿದರೆ ಜೀವ ತೆಗೆಯುವ ಬೆದರಿಕೆಯನ್ನೂ ಯುವಕ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಷಯ ತಿಳಿದ ಎಬಿವಿಪಿ ಕಾರ್ಯಕರ್ತರು ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲಾಗದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Previous articleಚಿನ್ನದ ನಾಡಿನ ಕಲಾವಿದೆಯ ಪ್ರತಿಭೆ ಅನಾವರಣ
Next articleಶಿರಸಿ ಉದ್ಯಮಿಗಳ ನಿವಾಸದ ಮೇಲೆ ಐಟಿ ದಾಳಿ