ಬಾಣಂತಿ ಹೊಟ್ಟೆಯಲ್ಲಿಯೇ ಬಟ್ಟೆ ಬಿಟ್ಟ ಸರ್ಕಾರಿ ವೈದ್ಯರು

0
8

ಟೇಕಲ್(ಕೋಲಾರ ಜಿಲ್ಲೆ): ಸರ್ಕಾರಿ ಆಸ್ಪತ್ರೆ ವೈದ್ಯರ ಕರ್ತವ್ಯ ನಿರ್ಲಕ್ಷö್ಯದಿಂದ ಬಾಣಂತಿ ಹೊಟ್ಟೆಯಲ್ಲಿ ಮೂರು ಅಡಿ ಉದ್ದದ ಬಟ್ಟೆ ಬಿಟ್ಟಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ರಾಮಸಾಗರದ ಗರ್ಭಿಣಿ ಚಂದ್ರಿಕಾ ವೈದ್ಯರ ನಿರ್ಲಕ್ಷ್ಯಕ್ಕೆ ಒಳಗಾದ ಮಹಿಳೆಯಾಗಿದ್ದು ಇದೇ ತಿಂಗಳ ಮೇ ೫ರಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೆರಿಗೆಂದು ದಾಖಲಾಗಿದ್ದರು, ಆದರೆ ಹೆರಿಗೆ ಸಮಯದಲ್ಲಿ ಹೊಟ್ಟೆ ಒಳಗೆ ಸುಮಾರು ಮೂರು ಅಡಿ ಉದ್ದದ ಬಟ್ಟೆಯನ್ನು ಬಿಟ್ಟಿದ್ದಾರೆ, ಆದರೆ ಹೆರಿಗೆ ನಂತರ ನಾಲ್ಕೈದು ದಿನಗಳಾದ ಮೇಲೆ ಪ್ರತಿದಿನ ಹೊಟ್ಟೆ ನೋವಿನಿಂದ ಚಂದ್ರಿಕಾ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಈ ವೇಳೆ ಗಾಯಕ್ಕೆ ಕ್ರೀಮನ್ನು ನೀಡಿದ್ದು ಅದನ್ನು ಹಚ್ಚುವಾಗ ಬಟ್ಟೆ ಕಂಡುಬಂದಿದೆ ಸ್ವಲ್ಪ ಸ್ವಲ್ಪ ಹೊರ ತೆಗೆದ ಬಳಿಕ ಆಕೆಯ ಆರೋಗ್ಯ ಸುಧಾರಿಸಿದೆ. ಇದೀಗ ಬಾಣಂತಿ ಮತ್ತು ಮಗು ಆರೋಗ್ಯದಿಂದಿದ್ದಾರೆ. ಅವರು ಹೇಳುವ ಪ್ರಕಾರ ಇದರಲ್ಲಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಮೊದಲೇ ಸಿಬ್ಬಂದಿಗೆ ತಿಳಿಸಿದರೂ ಸ್ಪಂದಿಸಲಿಲ್ಲ. ಆದರೆ ನಮಗಾದ ನೋವು, ಅನ್ಯಾಯ ಯಾರಿಗೂ ಆಗಬಾರದೆಂದು ಪತಿ ಕೋಲಾರ ಜಿಲ್ಲಾ ಶಸ್ತçಚಿಕಿತ್ಸಕರಿಗೆ ದೂರು ನೀಡಿದ್ದಾರೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಒಂದು ತಂಡವನ್ನು ರಚನೆ ಮಾಡಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Previous articleಐವರ ಅಸ್ಥಿಪಂಜರ ಪತ್ತೆ ಪ್ರಕರಣ: ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ
Next articleನಿವೃತ್ತಿ ಕುರಿತು ಯಾವುದೇ ನಿರ್ಧಾರ ನಾನು ಮಾಡಿಲ್ಲ