ಬಾಗಲಕೋಟೆ ಬಂದ್

0
33

ಬಸ್ ಇಲ್ಲದೇ ನಿಲ್ದಾಣದಲ್ಲೇ ಸಿಲುಕಿದ ಕುಟುಂಬ..!

ಬಾಗಲಕೋಟೆ: ಮಗನ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಿದ್ದ ದಂಪತಿಗಳಿಬ್ಬರು ಬಂದ್ ಕಾರಣದಿಂದಾಗಿ ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಸಿಲಿಕಿದ್ದಾರೆ.

ಹುನಗುಂದ ತಾಲೂಕಿನ ಗಂಜಿಹಾಲದ ಚನ್ನಮ್ಮ ಶರಣಯ್ಯ ಅರವಟಗುಮಠ ದಂಪತಿಗಳು ತಮ್ಮ‌ಪುತ್ರನ ಹೃದಯ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಿದ್ದರು, ಸೋಮವಾರ ಬೆಳಗ್ಗೆ ಅವರು ಬಾಗಲಕೋಟೆ ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದು, ಮುಂದೆ ಗಂಜಿಹಾಳಕ್ಕೆ ತೆರಳಲು ಬಸ್ ಇಲ್ಲದೆ ನಗರ ಬಸ್ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದಾರೆ.

ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ.‌ಮಕ್ಕಳೊಗೆ ಹಸಿವಾದರೆ ತಿನ್ನಿಸಲು ಹೊಟೇಲ್‌ಗಳೂ ತೆರೆದಿಲ್ಲ ಎಂದು ದಂಪತಿಗಳಿಬ್ಬರು ಅಸಹಾಯಕತೆ ತೋಡಿಕೊಂಡರು.

Previous articleಎಷ್ಟು ಭಾಗ್ಯ ನೀಡಿದರೇನು?
Next articleಫೆಬ್ರವರಿ 10 ರಿಂದ 12 ರವರೆಗೆ ಕುಂಭಮೇಳ