ಬಾಗಲಕೋಟೆ: ಬುಧವಾರ ನವನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಯುವನೋರ್ವ ಪ್ಯಾಲೆಸ್ತೈನ್ ಧ್ವಜ ಪ್ರದರ್ಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ನವನಗರದ ಎಲ್‌ಐಸಿ ವೃತ್ತದಿಂದ ಅಂಬೇಡ್ಕರ್ ಭವನ ಸಾಗುವ ಮಾರ್ಗ ಮಧ್ಯೆ ಯುವಕನೋರ್ವ ಬೃಹದಾಕಾರದ ಧ್ವಜವನ್ನು ಮೆರವಣಿಗೆಯಲ್ಲಿ ಗಮನಸೆಳೆಯುವಂತೆ ತಿರುವಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ವಿಡಿಯೋದ ಪರಿಶೀಲನೆಯಲ್ಲಿ ತೊಡಗಿರುವುದಾಗಿ ಎಸ್‌ಪಿ ವೈ.ಅಮರನಾಥ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.