ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

0
77

ಬಾಗಲಕೋಟೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ 6 ಜನರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ಹೊತ್ತು ದೈನಂದಿನವಾಗಿ ಬನಹಟ್ಟಿ ಕಡೆಯಿಂದ ಮುಧೋಳ ಕಡೆಗೆ ಬಸ್ ಸಂಚರಿಸುತ್ತಿತ್ತು. ಜಗದಾಳ ಕೆಇಬಿ ಸಮೀಪ ಕಾರ್‌ವೊಂದು ಎದುರಿಗೆ ಬಂದ ಕಾರಣ ಬೈಕ್ ಸವಾರ ವೇಗವಾಗಿ ಎರಗಿದ್ದಾನೆ. ಅಪಘಾತ ತಡೆಯುವ ನಿಟ್ಟಿನಲ್ಲಿ ಬಸ್ ಚಾಲಕ ಸಂಗಪ್ಪ ವಾಲಿಕಾರ ಯಶಸ್ವಿಯಾಗಿ, ಬೈಕ್ ಸವಾರನಿಗೆ ಸರಿಯಾಗಿ ಓಡಿಸುವಂತೆ ತಿಳಿಸಿದ್ದಾನೆ.
ಇಷ್ಟಕ್ಕೆ ಬುಲೇರೋ ವಾಹನದಲ್ಲಿ 6 ಜನರೊಂದಿಗೆ ಬಂದು ಬಸ್ ಅಡ್ಡಗಟ್ಟಿ ಚಾಲಕ ಸಂಗಪ್ಪನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಪರಾರಿ: ಪ್ರಕರಣ ವಿಕೋಪಕ್ಕೆ ತೆರಳಿ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಮುತ್ತಪ್ಪ ಗಾಜ್ಯಾಗೋಳ, ಶಿವಾನಂದ ಗಾಜ್ಯಾಗೋಳ, ವೆಂಕಟೇಶ ಗಾಜ್ಯಾಗೋಳ, ಸಂದೇಶ ಗಾಜ್ಯಾಗೋಳ, ಶ್ರೀಕಾಂತ ಗಿಡನ್ನವರ, ಸಾಗರ ಬಡಿಗೇರ ಪರಾರಿಯಾಗಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ.

Previous articleಬಸ್‌ ನಿಲ್ಲಿಸಿ ನಮಾಜ್‌ ಮಾಡಿದ ಚಾಲಕ: ಪ್ರಯಾಣಿಕರು ಗರಂ
Next articleಸಂಸತ್ ಆವರಣದಲ್ಲಿ ಬಸವ ಜಯಂತಿ ಆಚರಣೆ