ಬಸ್‌-ಕ್ಯಾಂಟರ್‌ ಮಧ್ಯೆ ಅಪಘಾತ: ನಾಲ್ವರು ಸಾವು

0
42

ಕೋಲಾರ: ತಮಿಳುನಾಡಿನ ರಾಣಿಪೇಟೆ ಬಳಿ ಕೆಎಸ್ಆರ್‌ಟಿಸಿ ಬಸ್ ಹಾಗೂ ಕರ್ನಾಟಕದ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ್ದು, ಕೋಲಾರ ಮೂಲದ‌ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಕ್ಯಾಂಟರ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸರ್ಕಾರಿ ಬಸ್ ಚಾಲಕ ಮುಳಬಾಗಿಲು ತಾಲೂಕು ನೆರ್ನಹಳ್ಳಿ ಬಾಬು ಹಾಗೂ ಸರ್ಕಾರಿ ಬಸ್‌ನಲ್ಲಿದ್ದ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್ ನಗರ ಗ್ರಾಮದ ರೈತ ಕೃಷ್ಣಪ್ಪ ಮೃತಪಟ್ಟವರು.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ನಲ್ಲೂರು ಗ್ರಾಮದ 50 ಜನ ಗ್ರಾಮಸ್ಥರು ತಮಿಳುನಾಡಿನ ಮೇಲ್ಮವತ್ತೂರು ಓಂಶಕ್ತಿ ದೇವಾಲಯಕ್ಕೆ ಪ್ರವಾಸ ಹೋಗಿ ವಾಪಸ್ಸಾಗುತ್ತಿದ್ದರು. ಇತ್ತ ಶ್ರೀನಿವಾಸಪುರ ತಾಲೂಕು ಸೀಗೆಹಳ್ಳಿ ಗ್ರಾಮದಿಂದ ಚೆನ್ನೈಗೆ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ನಡುವೆ ಕಳೆದ ರಾತ್ರಿ ಅಪಘಾತ ನಡೆದಿದೆ. ಗಾಯಾಳುಗಳನ್ನು ವೇಲೂರು ಸಿಎಂಸಿ ಆಸ್ಪತ್ರೆ, ರತ್ನಗಿರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ಈ ಕುರಿತಂತೆ ತಮಿಳುನಾಡಿನ ರಾಣಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಖ್ಯಾತ ನಿರೂಪಕಿ ಅಪರ್ಣ ಸಹೋದರ ಚೈತನ್ಯ ನಿಧನ
Next articleಬಸ್‌-ಬೈಕ್‌ ಅಪಘಾತ: ಇಬ್ಬರು ಮಕ್ಕಳು ಸಾವು