ಪ್ರತಿ ಠಾಣೆಯಿಂದ ೨೦ ಕ್ಕೂ ಅಧಿಕ ಮಾದಕ ವಸ್ತು ಬಳಕೆದಾರರು ವಶಕ್ಕೆ

0
20

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಉಪಯೋಗಿಸುವಂತವರ ಮೇಲೆ ದಾಳಿ ನಡೆಸಿ ಒಂದೊಂದು ಠಾಣೆಯಿಂದ ೨೦ ಕ್ಕೂ ಅಧಿಕ‌ ಜನರನ್ನು ವಶಕ್ಕೆ ಪಡೆಯಲಾಗಿದೆ.
ಕಿಮ್ಸ್, ಧಾರವಾಡ ಜಿಲ್ಲಾಸ್ಪತ್ರೆ, ಮಾನಸಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಗಾಂಜಾ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ.
ವೈದ್ಯಕೀಯ ಪರೀಕ್ಷೆಯ ನಂತರ ಇವರನ್ನು ಹುಬ್ಬಳ್ಳಿ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬಳಕೆದಾರರಿಗೆ ಮಾನಸಿಕ ರೋಗ ತಜ್ಞರಿಂದ ಕೌನ್ಸೆಲಿಂಗ್ ( ಆಪ್ತಸಮಾಲೋಚನೆ ), ಬಳಕೆದಾರರ ಪೋಷಕರಿಗೆ ಮಕ್ಕಳ ಬಗೆಗಿನ ಕಾಳಜಿಯ ಬಗ್ಗೆ ಓರಿಯಂಟೇಷನ್ ಮಾಡಲಾಗುವುದು ಎಂದು ಪೊಲೀಸ್ ಆಯಕ್ತ ಎನ್.ಶಶಿಕುಮಾರ ತಿಳಿಸಿದ್ದಾರೆ.

Previous articleಗಂಭೀರ ಸಾರಥ್ಯದ ಟೀಂ ಇಂಡಿಯಾ ಶುಭಾರಂಭ
Next articleಸಚಿವರ ತೋಟಕ್ಕೂ ಬಂತು ಘಟಪ್ರಭಾ ನದಿ ಪ್ರವಾಹ