ಪೊಲೀಸ್ ಬೆದರಿಕೆ ಪ್ರಕರಣ: ಶಾಸಕ ಹರೀಶ್ ಪೂಂಜಾ ಬಂಧನ ಸಾಧ್ಯತೆ

0
15

ಬೆಳ್ತಂಗಡಿ: ಪೊಲೀಸರಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಶಾಸಕರ ಮನೆಗೆ ಪೊಲೀಸ್ ತಂಡ ಆಗಮಿಸಿದ್ದು, ಪೊಲೀಸರು ಬೆಳ್ತಂಗಡಿ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಪೊಲೀಸರ ತಂಡ ಶಾಸಕರ ಮನೆಯೊಳಗಿದ್ದು, ಯಾವುದೇ ಸಮಯದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಶಾಸಕ ಹರೀಶ್ ಪೂಂಜಾರ ಮನೆಗೆ ಪೊಲೀಸರು ಆಗಮಿಸಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮನೆ ಮುಂಭಾಗದಲ್ಲಿ ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಬೆಳ್ತಂಗಡಿ ನಗರದಲ್ಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

Previous articleಅಂಜಲಿ ಕೊಲೆ ಆರೋಪಿ ಗುಣಮುಖ: ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು
Next articleಶಾಸಕ ಪೂಂಜ ಬಂಧನಕ್ಕೆ ಆಗಮಿಸಿದ ಪೊಲೀಸರು: ಶಾಸಕರ ಮನೆ ಮುಂದೆ ಹೈಡ್ರಾಮ