ಪೊಲೀಸ್‌ರ ಮೇಲೆ ಹಲ್ಲೆಗೆ ಯತ್ನ: ನಟೋರಿಯಸ್ ಪಾಲಾ ಬಂಧನ

0
22

ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು, ದರೋಡೆಕೋರನ​ ಮೇಲೆ ಫೈರಿಂಗ್​

ಧಾರವಾಡ: ಮನೆ ಕಳವು ಪ್ರಕರಣದ ಆರೋಪಿ, ನೆಟೋರಿಯಸ್ ಪಾಲಾ ವೆಂಕಟೇಶ್ವರರಾವ್ ಎರಡೂ ಕಾಲಿಗೆ ಪೋಲೀಸರು ಶನಿವಾರ ಬೆಳಗ್ಗೆ ಗುಂಡು ಹೊಡೆದಿದ್ದಾರೆ.
ಧಾರವಾಡದ ನವಲೂರಿನ ಮನೆಯೊಂದಕ್ಕೆ ಕನ್ನ ಹಾಕಿದ್ದ ಭೂಪ, ನಟೋರಿಯಸ್ ಪಾಲಾನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಆರೋಪಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಪಿಎಸ್ ಸೇರಿ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 80 ಕ್ಕೂ ಹೆಚ್ಚು ಕಳ್ಳತನದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಪಾಲಾ ವೆಂಕಟೇಶ್ವರ‌ರಾವ್ ಮೂಲತಃ ಆಂದ್ರಪ್ರದೇಶದವ. ಸುಮಾರು ಐದು ರಾಜ್ಯಗಳ ಪೊಲೀಸರ ಬೇಕಾಗಿದ್ದ ಪಾಲಾ ಈಗ ಪೊಲೀಸರ ಹಾಗೂ ಆಸ್ಪತ್ರೆ ಸೆರೆಯಲ್ಲಿ ಇದ್ದಾನೆ.

Previous articleನಿಮ್ಮ ಮುಗುಳ್ನಗೆ ಕಳೆದುಕೊಳ್ಳಬೇಡಿ
Next articleAus vs Ind: ಪುಷ್ಪ ಸ್ಟೈಲ್‌ನಲ್ಲಿ ನಿತೀಶ್ ಚೊಚ್ಚಲ ಅರ್ಧ ಶತಕದ ಸಂಭ್ರಮ