ಪೊಲೀಸರ ಅವಹೇಳನ: ಇಬ್ಬರು ಯೂಟ್ಯೂಬರ್ ವಿರುದ್ಧ ಎಫ್ ಐಆರ್ ದಾಖಲು

0
20

ದಾವಣಗೆರೆ: ಸಾಮಾಜೀಕ ಜಾಲತಾಣದಲ್ಲಿ ಪೊಲೀಸರನ್ನು ಅವಹೇಳನ ಮಾಡಿದ ಆರೋಪದ ಮೇಲೆ ಇಬ್ಬರು ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ ಡಿಎಕ್ಸ್ 5ಗೇಮಸ್೯491, ಹನುಮೇಶ್ ಕೆ.ನಾಯಕ 815 ಎಂಬ ಹೆಸರಿನ ಯೂಟ್ಯೂಬ್ ಖಾತೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ತಾಲೂಕಿನ ಹೆಬ್ಬಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ಟೋಲ್ ಬಳಿ ಡಿಎಆರ್ ಪೇದೆ ರಾಮಪ್ಪ ಪೂಜಾರಿ ಸಾವಿನ ಕುರಿತು ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ ಸುದ್ದಿಗೆ ಈ ಎರಡು ಖಾತೆಗಳಿಂದ ಅವಹೇಳನಕಾರಿ ಸಂದೇಶ ರವಾನೆಯಾಗಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯದ ಅನುಮತಿ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ.

Previous articleಗ್ಯಾರಂಟಿ ನಿಲ್ಲಿಸುವುದಕ್ಕೆ ಕಳ್ಳಮಾರ್ಗ ಹುಡುಕಬೇಡಿ
Next articleವಿವಾಹ ಆಗುವುದಾಗಿ ನಂಬಿಸಿ ಯುವಕನಿಂದ1.37 ಲಕ್ಷ ರೂ. ವಂಚಿಸಿದ ಯುವತಿ!