ಪುಂಡಾಟವನ್ನು ಮಟ್ಟ ಹಾಕುವುದು ನಮಗೆ ಗೊತ್ತಿದೆ

0
12

ಬೆಂಗಳೂರು: ಜೈಲಿನ ಒಳಗೂ ಅವರ ಪುಂಡಾಟವನ್ನು ಮಟ್ಟ ಹಾಕುವುದು ನಮಗೆ ಗೊತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಉಸ್ತುವಾರಿಯಲ್ಲಿ ಬರೀ ಅಕ್ರಮಗಳದ್ದೇ ಸದ್ದು ಎಂದು ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿ ಪೋಸ್ಟ್‌ ಮಾಡಿರುವ ಅವರು Dear ಬಿಜೆಪಿ, ಕಲಬುರಗಿಯ ಜೈಲುಗಳು ಸದ್ಯ ಗೂಂಡಾಗಿರಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ನಿಮ್ಮದೇ ಪಕ್ಷದ ಮಾಜಿ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರಿಂದಲೇ ತುಂಬಿದ್ದು ಅಲ್ಲಿಯೂ ಅವರ ಪುಂಡಾಟಿಕೆ ಮುಂದುವರೆದಿದೆ.
ಆದರೆ ನಿಮಗೆ ಚಿಂತೆ ಬೇಡ. ಜೈಲಿನ ಒಳಗೂ ಅವರ ಪುಂಡಾಟವನ್ನು ಮಟ್ಟ ಹಾಕುವುದು ನಮಗೆ ಗೊತ್ತಿದೆ. ನೀವು ಅವರಲ್ಲಿ ಯಾರಿಗೆ ಪಕ್ಷದ ಉನ್ನತ ಹುದ್ದೆ ನೀಡಬಹುದು, ಯಾರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಬಹುದು ಎಂಬ ಬಗ್ಗೆ ಚಿಂತಿಸಿ ಎಂದಿದ್ದಾರೆ.

Previous articleಹವಾಮಾನ ವಿಕೋಪ-ಪೈಲಟ್‌ಗೆ ತಾಪ
Next articleಶ್ರೀರಾಮನ ಪ್ಲೆಕ್ಸ್​​ ಬ್ಲೇಡ್​​ನಿಂದ ಹರಿದ ದುಷ್ಕರ್ಮಿಗಳು